ಮುಂಬೈ: ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಾಸಕರ ವಿರುದ್ಧ ಕಿಡಿ ಕಾರಿರುವ ಆದಿತ್ಯ ಠಾಕ್ರೆ, ಅವರೆಲ್ಲರೂ ಪಲಾಯನವಾದಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂಬೈನಲ್ಲಿ ಮಾತನಾಡಿರುವ ಆದಿತ್ಯ ಠಾಕ್ರೆ, ಸರ್ಕಾರದಿಂದ ಆಗಿರುವ ತಪ್ಪಾದರೂ ಏನು ? ಈ ಬಗ್ಗೆ ನೇರವಾಗಿ ಬಂದು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಬಂಡುಕೋರರಲ್ಲ, ದೇಶದ್ರೋಹಿಗಳು ಎಂದು ಹೇಳಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಶಾಸಕರಿಗೆ ಚುನಾವಣೆ ಎದುರಿಸಿ ಗೆದ್ದು ಬರುವ ತಾಕತ್ತಿಲ್ಲ. ಶಿವಸೇನೆಯಿಂದ ಆಯ್ಕೆಯಾಗಿ ಈಗ ಪಲಾಯನ ಮಾಡಿ ಗುವಾಹಟಿ ರೆಸಾರ್ಟ್ ನಲ್ಲಿ ಕುಳಿತಿದ್ದಾರೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.