ವಿಜಯನಗರ: ಖಾತೆ ಹಂಚಿಕೆ ವಿಚಾರವಾಗಿ ತೀವ್ರ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ನಡೆ ಇನ್ನೂ ನಿಗೂಢವಾಗಿದ್ದು, ನಾಳೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಖಾತೆ ಬದಲಾವಣೆಗಾಗಿ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್, ಸಿಎಂ ಬೊಮ್ಮಾಯಿ ಅವರಿಗೆ ಆ.15ರ ಗಡುವು ನೀಡಿದ್ದರು. ಆದರೆ ಈವರೆಗೂ ಅವರ ಖಾತೆ ಬದಲಾವಣೆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಆನಂದ್ ಸಿಂಗ್ ಅಭಿ ಪಿಕ್ಚರ್ ಬಾಕಿ ಹೈ… ನನ್ನ ಭಾವನೆಗಳನ್ನು, ನನ್ನ ಬೇಡಿಕೆಗಳನ್ನು ಈಗಾಗಲೇ ಸಿಎಂ ಅವರಿಗೆ ತಿಳಿಸಿದ್ದೇನೆ. ಮುಂದಿನ ನಿರ್ಧಾರ ಅವರು ತಿಳಿಸಬೇಕು. ನನ್ನ ರಾಜಕೀಯ ನಡೆ ಬಗ್ಗೆ ನಾಳೆ ಹೇಳುತ್ತೇನೆ ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಸ್ವಾತಂತ್ರ್ಯೋತ್ಸವದಂದು ಕೊಲ್ಹಾಪುರಿ ಪೇಟದಲ್ಲಿ ಮಿಂಚಿದ ಪ್ರಧಾನಿ ಮೋದಿ
ನಾನು ಖಾತೆ ಇನ್ ಚಾರ್ಜ್ ತೆಗೆದುಕೊಳ್ಳದಿದ್ದರೂ ಕೆಲಸಗಳು ನಡೆಯುತ್ತವೆ. ಅಧಿಕಾರಿಗಳು ಇದ್ದರೆ ಸಾಕು ಕೆಲಸ ಕಾರ್ಯಗಳು ನಡೆಯುತ್ತವೆ. ನನ್ನ ಮುಹೂರ್ತ ಇಡುವವರು ಬೇರೆಯವರಿದ್ದಾರೆ. ಮುಹೂರ್ತ ನೋಡಿ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.