ಬೆಂಗಳೂರು: ರಾಜ್ಯ ಕಾಂಗ್ರೆಸ್ ಬೆಳವಣಿಗೆಯನ್ನು ಗಮನಿಸಿದರೆ ಅಪ್ಪನಾಣೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು ಅಪ್ಪನಾಣೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲ್ಲ ಎಂದು. ಈಗ ನಾನು ಹೇಳುತ್ತಿದ್ದೇನೆ ಸಿದ್ದರಾಮಯ್ಯನವರೇ ಅಪ್ಪನಾಣೆ ನೀವು ಮತ್ತೆ ಸಿಎಂ ಆಗಲ್ಲ ಎಂದು ಹೇಳಿದ್ದಾರೆ.
ʼಹವಾಮಾನʼ ವೈಪರೀತ್ಯ ಕುರಿತು ಐಪಿಸಿಸಿ ರಿಪೋರ್ಟ್ ನಲ್ಲಿ ಮಹತ್ವದ ಮಾಹಿತಿ
ಕಾಂಗ್ರೆಸ್ ಪಕ್ಷದ ನಾಯಕರು ತಮ್ಮದೇ ಶಾಸಕರ ಮನೆಗೆ ಬೆಂಕಿ ಹಾಕಿ ಆ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡವರು. ಶಾಸಕರಿಗೆ ನ್ಯಾಯ ಕೊಡಿಸಿಲ್ಲ. ಬಿಜೆಪಿಯಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತ ಕೂಡ ಓನರ್ ಆಗ್ತಾನೆ. ಅದೇ ಜೆಡಿಎಸ್ ನಲ್ಲಿ ದೊಡ್ಡಗೌಡರು ಮಾತ್ರ ಓನರ್. ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಓನರ್ ಆಗ್ತಾರೆ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಮೇಕೆದಾಟು ಯೋಜನೆಗೆ ಅಡ್ಡ ಹಾಕಿದ್ದು ಯಾರು? ಈಗ ಯೋಜನೆಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ನಾಟಕವಾಡುತ್ತಿದ್ದಾರೆ. ಕೋಲಾರಕ್ಕೆ ಎತ್ತಿನ ಹೊಳೆ ನೀರು ತರ್ತೇವೆ ಎಂದರು. ಏನಾಯ್ತು? ಎತ್ತು ಒಂದು ಕಡೆ, ಹೊಳೆ ಒಂದು ಕಡೆ ಆಗಿದೆ. ಈಗ ಮೇಕೆದಾಟು ಎಂದು ಪಾದಯಾತ್ರೆ ಹೊರಟಿದ್ದಾರೆ. ಕಾಂಗ್ರೆಸ್ ಜೀವನದುದ್ದಕ್ಕೂ ಮೇಕೆ ತಿನ್ನುತ್ತಾ ಪಾದಯಾತ್ರೆ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.