ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಅಪಾರ್ಟ್ ಮೆಂಟ್ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೋರ್ವ ಸಜೀವ ದಹನಗೊಂಡಿದ್ದಾರೆ.
ನಗರದ ದೇವರಚಿಕ್ಕನಹಳ್ಳಿಯ ಆಶ್ರಿತ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ಒಂದರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮನೆಯಿಂದ ಹೊರಬರಲಾಗದೇ ವ್ಯಕ್ತಿ ಬೆಂಕಿಗಾಹುತಿಯಾಗಿದ್ದಾನೆ. ಅಪಾರ್ಟ್ ಮೆಂಟ್ ನ ಒಂದು ಫ್ಲ್ಯಾಟ್ ಧಗ ಧಗನೆ ಹೊತ್ತಿ ಉರಿದಿದೆ. ಅಕ್ಕಪಕ್ಕದ ನಿವಾಸಗಳಿಗೂ ಹಾನಿಯಾಗಿವೆ.
ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಇಡೀ ಅಪಾರ್ಟ್ ಮೆಂಟ್ ಜನರನ್ನು ಮನೆಯಿಂದ ಹೊರಗೆ ಕಳುಹಿಸಿ ಕಾರ್ಯಾಚರಣೆ ನಡೆಸಿದ್ದಾರೆ.