alex Certify BIG NEWS: ಅಪಾರ್ಟ್ ಮೆಂಟ್ ಗಳೇ ಡೇಂಜರ್ ಝೋನ್; ರಾಜಧಾನಿಯಲ್ಲಿ ಹೆಚ್ಚಿದ ಕೊರೊನಾ ಸೋಂಕು; 32 ಏರಿಯಾಗಳಲ್ಲಿ ವೈರಸ್ ಸ್ಫೋಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪಾರ್ಟ್ ಮೆಂಟ್ ಗಳೇ ಡೇಂಜರ್ ಝೋನ್; ರಾಜಧಾನಿಯಲ್ಲಿ ಹೆಚ್ಚಿದ ಕೊರೊನಾ ಸೋಂಕು; 32 ಏರಿಯಾಗಳಲ್ಲಿ ವೈರಸ್ ಸ್ಫೋಟ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚುತ್ತಿದ್ದು, ಅದರಲ್ಲೂ ಅಪಾರ್ಟ್ ಮೆಂಟ್ ಗಳಲ್ಲೇ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 8 ವಲಯದ 32 ಏರಿಯಾಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳೆಂದು ಗುರುತಿಸಲಾಗಿದೆ.

ಒಂದೇ ದಿನ 5 ಅಪಾರ್ಟ್ ಮೆಂಟ್ ಗಳ ನಿವಾಸಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಪೂರ್ವ ಪೆವಿಲಿಯನ್ ಸೇರಿದಂತೆ ಹಲವು ಅಪಾರ್ಟ್ ಮೆಂಟ್ ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನ 8 ವಲಯಗಳ 32 ಏರಿಯಾಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳೆಂದು ಗುರುತಿಸಲಾಗಿದೆ.

ಕೊರೊನಾ ನಿಯಮ ಮುರಿದ್ರೆ ಬೀಳಲಿದೆ 1 ಕೋಟಿ ರೂಪಾಯಿ ದಂಡ…!

ಬೊಮ್ಮನಹಳ್ಳಿ ವಲಯ ಸಿಂಗಸಂಧ್ರ, ಯಲಚೇನಹಳ್ಳಿ, ಬೇಗೂರು, ಅರಕೆರೆ, ಪೂರ್ವ ವಲಯದ ಬಾಣಸವಾಡಿ, ಲಿಂಗರಾಜಪುರ, ಜೋಗುಪಾಳ್ಯ, ಮಹಾದೇವಪುರ ವಲಯದ ರಾಮಮೂರ್ತಿನಗರ, ಆರ್.ಆರ್.ನಗರ ವಲಯದ ಹಮ್ಮಿಗೆಪುರ, ಆರ್.ಆರ್.ನಗರ, ಲಗ್ಗೆರೆ, ದಕ್ಷಿಣ ವಲಯದ ಕೋರಮಂಗಲ, ವಿಜಯನಗರ, ಗಿರಿನಗರ, ಬಸವನಗುಡಿ, ಪಶ್ಚಿಮ ವಲಯದ ಅರಮನೆ ನಗರ, ಬಸವೇಶ್ವರ ನಗರ, ಮಾರಪ್ಪನಪಾಳ್ಯ, ಯಲಹಂಕದ ಕುವೆಂಪುನಗರ, ದೊಡ್ಡಬೊಮ್ಮಸಂದ್ರ, ದಾಸರಹಳ್ಳಿ ವಲಯದ ಅಬ್ಬಿಗೆರೆ, ನೆಲಮಹೇಶ್ವರಿ ನಗರ ಸೇರಿದಂತೆ ಹಲವು ಪ್ರದೇಶಗಳನ್ನು ಮೈಕ್ರೋ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಮೂರನೇ ಅಲೆ ಭೀತಿ ಹೆಚ್ಚುತಿದ್ದು, ಕೋವಿಡ್ ನಿಯಂತ್ರಣಕ್ಕೆ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಂಟೈನ್ಮೆಂಟ್ ಝೋನ್ ಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...