alex Certify BIG NEWS: ಅಪಘಾತಕ್ಕೀಡಾದ ಕುಟುಂಬಗಳಿಗೆ ಪರಿಹಾರ ಹೆಚ್ಚಿಸಿದ ಕೇಂದ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪಘಾತಕ್ಕೀಡಾದ ಕುಟುಂಬಗಳಿಗೆ ಪರಿಹಾರ ಹೆಚ್ಚಿಸಿದ ಕೇಂದ್ರ….!

ಹಿಟ್ ಅಂಡ್ ರನ್ ಅಪಘಾತಕ್ಕೀಡಾಗಿ, ಸಾವನ್ನಪ್ಪುವ ಸಂತ್ರಸ್ತರ ಕುಟುಂಬಗಳಿಗೆ ನೀಡುವ ಪರಿಹಾರವನ್ನು ಎಂಟು ಪಟ್ಟು ಹೆಚ್ಚಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಸಧ್ಯ ಅಪಘಾತಕ್ಕೀಡಾಗಿ ಸಾಯುವವರ ಕುಟುಂಬಗಳಿಗೆ 50,000 ಪರಿಹಾರ ನೀಡಲಾಗುತ್ತಿದೆ, ಇದು ಇನ್ಮುಂದೆ ಎರಡು ಲಕ್ಷಕ್ಕೇರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿದು ಬಂದಿದೆ.

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ಪ್ರಸ್ತುತ 12,500 ರೂ. ಪರಿಹಾರ‌ ನೀಡಲಾಗುತ್ತಿದೆ. ಆದರೆ ಇನ್ಮುಂದೆ ಈ ಪರಿಹಾರ ಧನ 50,000 ರೂ.ಗೆ ಏರಿಕೆಯಾಗಿದೆ.

ಫೆಬ್ರವರಿ 25 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಸಚಿವಾಲಯವು ಈ ಯೋಜನೆಯನ್ನು ‘ಹಿಟ್ ಅಂಡ್ ರನ್ ಮೋಟಾರು ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ಯೋಜನೆ-2022’ ಎಂದು ಕರೆಯಬಹುದೆಂದು ತಿಳಿಸಿದೆ. ಜೊತೆಗೆ ಈ ಯೋಜನೆ ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

BIG NEWS: ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ತ್ವರಿತಗೊಳಿಸಿ; ಪ್ರಧಾನಿಗೆ ಪತ್ರ ಬರೆದ ಮಾಜಿ ಪ್ರಧಾನಿ

ಯೋಜನೆಯಡಿಯಲ್ಲಿ ಸಚಿವಾಲಯವು, ರಸ್ತೆ ಅಪಘಾತಗಳ ವಿವರವಾದ ತನಿಖೆ, ವಿವರವಾದ ಅಪಘಾತ ವರದಿ, ವಿಮೆ ಕ್ಲೈಮ್ ಮತ್ತು ಅಪಘಾತ ಪರಿಹಾರದ ಕ್ಲೈಮ್‌ಗಳ ತ್ವರಿತ ಇತ್ಯರ್ಥ ಸೇರಿದಂತೆ ಇಡೀ ಘಟನೆಯ ವರದಿ ಸಿದ್ಧಪಡಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ವಿವಿಧ ಮಧ್ಯಸ್ಥಗಾರರಿಗೆ ಗಡುವು ನೀಡಲಿದೆ. ಒಟ್ಟಿನಲ್ಲಿ ಅಪಘಾತದಲ್ಲಿ ಗಾಯವಾಗಿರುವವರು ಅಥವಾ ಅಪಘಾತದಿಂದ ಜೀವವನ್ನೇ ಕಳೆದುಕೊಂಡ ಕುಟುಂಬದವರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು ಇದರ ಮುಖ್ಯ ಧ್ಯೇಯ.‌

ಅಷ್ಟೇ ಅಲ್ಲಾ ಈ ಯೋಜನೆಯನ್ನು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರ, ಮೋಟಾರು ವಾಹನಗಳ ಅಪಘಾತ ನಿಧಿಯನ್ನು ಸ್ಥಾಪಿಸಲಿದೆ. ಇದನ್ನು ವಿಶೇಷವಾಗಿ ಅಪಘಾತವಾದವರಿಗೆ ಚಿಕಿತ್ಸೆ ನೀಡಲು ಹಾಗೂ ಹಿಟ್ ಅಂಡ್ ರನ್ ಅಪಘಾತದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಒದಗಿಸಲು ಬಳಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...