ಬೆಂಗಳೂರು: ಬಿ.ಎಸ್. ಯಡಿಯೂರಪ್ಪನವರ ರಾಜೀನಾಮೆಯಿಂದ ನೋವಾಗಿದೆ. ನನ್ನ ಕಣ್ಣಂಚಲ್ಲೂ ನೀರು ತರಿಸಿದೆ. ಆದರೆ ಬಿಜೆಪಿಯಲ್ಲಿ ಇದು ಅನಿವಾರ್ಯವಾಗಿತ್ತು. 75 ವರ್ಷ ದಾಟಿದವರಿಗೆ ಪಕ್ಷದಲ್ಲಿ ಅಧಿಕಾರ ನೀಡಲ್ಲ ಎಂಬುದು ಸಿದ್ಧಾಂತ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರಾಣಿ, ಯಡಿಯೂರಪ್ಪ ಓರ್ವ ಮಹಾನ್ ನಾಯಕ. ಅತಿ ಹೆಚ್ಚು ಶಾಸಕರನ್ನು ಬೆಳಸಿದವರು ಯಡಿಯೂರಪ್ಪ, ನಮ್ಮನ್ನು ಮಕ್ಕಳಂತೆ ನೋಡಿಕೊಂಡಿದ್ದಾರೆ. ಆದರೆ ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಇಲ್ಲ. ಯುವಕರಿಗೆ ಅಧಿಕಾರ ಬಿಟ್ಟುಕೊಡುವುದು ಪಕ್ಷದ ಸಿದ್ಧಾಂತ. ಹಾಗಾಗಿ ಈಗ ಹೊಸ ನಾಯಕನ ಆಯ್ಕೆ ಸಂದರ್ಭ ಬಂದಿದೆ ಎಂದರು.
ಬೆಚ್ಚಿಬೀಳಿಸುವಂತಿದೆ ಈ ವಂಚನೆ…! ಅಶ್ಲೀಲ ಚಿತ್ರದ ಹೆಸರಲ್ಲಿ ಖದೀಮರಿಂದ ನಡೆಯುತ್ತಿತ್ತು ವಸೂಲಿ
ಸಿಎಂ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಿಲ್ಲ. ಈ ಹಿಂದೆಯೂ ಲಾಬಿ ನಡೆಸಿಲ್ಲ. ಮುಂದೆಯೂ ಮಾಡಲ್ಲ. ಅಂತಹ ಪರಿಪಾಠ ನನ್ನದಲ್ಲ. ನಾನು ಸಿಎಂ ಆಗುತ್ತೇನೆ ಎಂದೂ ಹೇಳಿಲ್ಲ. ಕೆಲವರು ಸಿಎಂ ಸ್ಥಾನಕ್ಕೆ ನನ್ನ ಹೆಸರು ಹೇಳಿದ್ದಾರೆ. ಅದು ನನ್ನ ಮೇಲಿನ ಅಭಿಮಾನವಷ್ಟೆ. ಬಿಜೆಪಿಯಲ್ಲಿ ಎಲ್ಲಾ ಶಾಸಕರೂ ಸಮರ್ಥರಿದ್ದಾರೆ. ಹೊಸ ನಾಯಕ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಹೇಳಿದ್ದಾರೆ.