alex Certify BIG NEWS: ಅದ್ದೂರಿ ಕರಗ ಉತ್ಸವಕ್ಕೆ ಬಿಬಿಎಂಪಿ ʼಗ್ರೀನ್ ಸಿಗ್ನಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅದ್ದೂರಿ ಕರಗ ಉತ್ಸವಕ್ಕೆ ಬಿಬಿಎಂಪಿ ʼಗ್ರೀನ್ ಸಿಗ್ನಲ್ʼ

ಕೊರೋನಾ ವೈರಸ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕರಗ ಉತ್ಸವ ಸರಳವಾಗಿ ನಡೆದಿದ್ದು ತಿಳಿದಿರುವ ಸಂಗತಿ. ಈ ಬಾರಿಯೂ ಹಾಗೇ ಆಗಬಹುದು ಎಂದು ಭಕ್ತರು ಆತಂಕದಲ್ಲಿದ್ದರು. ಆದರೆ ಕರಗ ಉತ್ಸವ ಸಮಿತಿಯ ಸತತ ಪ್ರಯತ್ನದಿಂದ, 2022ರ ಅದ್ಧೂರಿ ಉತ್ಸವಕ್ಕೆ ಬಿಬಿಎಂಪಿ ಅನುಮತಿ ನೀಡಿದೆ.

ಹೌದು, ದರ್ಮರಾಯಸ್ವಾಮಿ, ದ್ರೌಪದಮ್ಮ ದೇವಿಯ ಕರಗ ಉತ್ಸವಕ್ಕೆ ಪಾಲಿಕೆ ಷರತ್ತು ಬದ್ದ ಅನುಮತಿ ನೀಡಿದೆ.‌ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಕರಗ ಉತ್ಸವ ಕಳೆದ ಎರಡು ವರ್ಷಗಳಿಂದ ಸರಳ ಪೂಜೆಗೆ ಸೀಮಿತವಾಗಿತ್ತು. ಆದರೆ ಈ ಬಾರಿ ನಗರದಲ್ಲಿ ಕೋವಿಡ್ ಕಡಿಮೆ ಅದ ಹಿನ್ನೇಲೆ ಕರಗ ಮಹೋತ್ಸವಕ್ಕೆ ಅನುಮತಿ ದೊರೆತಿದ್ದು, ಮಾರ್ಚ್ 8 ರಂದು ದ್ರೌಪದಮ್ಮ ಕರಗ ಉತ್ಸವ ನಡೆಸಲು ದಿನಾಂಕ ಫಿಕ್ಸ್ ಆಗಿದೆ. ದೇವಸ್ಥಾನ ಹಾಗೂ ಕರಗ ಉತ್ಸವ ಸಮಿತಿ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ.‌

ಇತ್ತೀಚಿಗೆ ಉತ್ಸವಕ್ಕೆ ಅನುಮತಿ ನೀಡಿ ಎಂದು, ಕರಗ ಉತ್ಸವ ಸಮಿತಿಯ ಅಧ್ಯಕ್ಷ ಪಿ.ಅರ್. ರಮೇಶ್ ಅವರು ಕರ್ನಾಟಕ ಸರ್ಕಾರ ಹಾಗೂ ಪಾಲಿಕೆಗೆ ಪತ್ರ ಬರೆದಿದ್ದರು. ಈ ಮನವಿಯನ್ನ ಸ್ವೀಕರಿಸಿರುವ ಪಾಲಿಕೆ, ಕರಗ ಸಮಿತಿಗೆ ಮೌಖಿಕವಾಗಿ ಒಪ್ಪಿಗೆ ನೀಡಿದೆ.

ನಾಡಪ್ರಭು ಕೆಂಪೇಗೌಡರ ಕಾಲದಿಂದಲು ಕರಗ ಉತ್ಸವ ಆಚರಣೆ ನಡೆಯುತ್ತಿದೆ. ಸುಮಾರು 800 ವರ್ಷಗಳ ಇತಿಹಾಸವಿರೋ ಕರಗ ಉತ್ಸವ ಪ್ರತಿವರ್ಷ ನಡೆಯುತ್ತದೆ. ಈ ಕರಗ ಉತ್ಸವದಿಂದಲೇ ಬೆಂಗಳೂರಿನ ತಿಗಳರಪೇಟೆಯಲ್ಲಿರೋ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಸ್ಥಾನ ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿದೆ.

ಎರಡು ವರ್ಷಗಳಿಂದ ನಿಂತಿದ್ದ ಕರಗಕ್ಕೆ ಈ ಬಾರಿ ಚಾಲನೆ ಸಿಕ್ಕಿರುವುದರಿಂದ, ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ರಾಜ್ಯದ ಹಲವಾರು ಭಾಗಗಳಿಂದ, ವಿದೇಶಗಳಿಂದಲೂ ಕರಗ ಉತ್ಸವ ಕಣ್ತುಂಬಿಕೊಳ್ಳಲು ಭಕ್ತರು ಆಗಮಿಸುತ್ತಾರೆ. ಹೀಗಾಗಿ ದೇವಸ್ಥಾನದ ಅಡಳಿತ ಮಂಡಳಿ ಉತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಅಂದಹಾಗೇ, ಬಿಬಿಎಂಪಿ ಈ ಬಾರಿ ತನ್ನ ಬಜೆಟ್ ನಲ್ಲಿ ಕರಗ ಉತ್ಸವಕ್ಕೆ ಒಂದೂವರೆ ಕೋಟಿ ಅನುದಾನ ನೀಡಬಹುದು ಎಂದು ಹೇಳಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...