ನವದೆಹಲಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಬಗ್ಗೆ ಕಿಡಿಕಾರಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಅದೊಂದು ಅನೈತಿಕ ಸರ್ಕಾರವಾಗಿತ್ತು. ಅದಕ್ಕಾಗಿಯೇ ಕಾಂಗ್ರೆಸ್ ನ್ನು ಬಿಟ್ಟು ಬಂದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಸಚಿವ ಸುಧಾಕರ್, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅನೈತಿಕ ಸರ್ಕಾರವಾಗಿತ್ತು. ಜೆಡಿಎಸ್ ವಿರುದ್ಧ ಗೆದ್ದು ಅವರ ಜೊತೆ ಹೇಗೆ ಸರ್ಕಾರ ಮಾಡಲಿ? ನಾನು ಗೆದ್ದು ದೇವನಹಳ್ಳಿಗೆ ಬರುಷ್ಟರಲ್ಲಿ ಸಿಎಂ ಆಯ್ಕೆಯಾಗಿತ್ತು. ಸಮ್ಮಿಶ್ರ ಸರ್ಕಾರವಾಗಿದ್ದಕ್ಕೇ ನಾನು ಕಾಂಗ್ರೆಸ್ ಬಿಟ್ಟು ಬಂದೆ ಎಂದು ತಿಳಿಸಿದ್ದಾರೆ.
ನ್ಯೂಯಾರ್ಕ್ ಬೀದಿಯಲ್ಲಿ ಬಾಲಿವುಡ್ ಗೀತೆ ಗುನುಗಿದ ಭಾರತೀಯ
ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತಿದ್ದರು. ಅವತ್ತು ಅವರೇ ಎರಡು ದಿನ ಸೋಲಿನಿಂದ ಹೊರಬಂದಿರಲಿಲ್ಲ. ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆ ಎಲ್ಲಾ ತೀರ್ಮಾನವನ್ನೂ ಹೈಕಮಾಂಡ್ ಕೈಗೊಂಡಿತ್ತು. ಅಂತಹ ಸರ್ಕಾರದಲ್ಲಿ ಇರುವುದಕ್ಕಿಂತ ಬಿಜೆಪಿಗೆ ಸೇರುವುದು ಒಳ್ಳೆಯದೆಂದು ತೀರ್ಮಾನಿಸಿದೆ ಎಂದರು.
ಕೊಲೆಗಡುಕ ಸರ್ಕಾರ: ಕುಮಾರಸ್ವಾಮಿ ಆಕ್ರೋಶ
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸುಧಾಕರ್, ಗಾಂಧಿ ಕುಟುಂಬವನ್ನು ಬೈದವರು ಈಗ ಹೊಗಳುತ್ತಿದ್ದಾರೆ. 30-40 ವರ್ಷ ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದ್ರು. ಈಗ ಕಾಂಗ್ರೆಸ್ ಗೆ ಹೋಗಿ ಗಾಂಧಿ ಕುಟುಂಬ ಹೊಗಳುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಇರುವವರೆಲ್ಲ ಮೂಲ ಕಾಂಗ್ರೆಸ್ಸಿಗರಲ್ಲ. ಜನತಾ ಪರಿವಾರದಿಂದ ಬಂದವರೇ ಕಾಂಗ್ರೆಸ್ ನಲ್ಲಿ ಹೆಚ್ಚು ಎಂದು ಟಾಂಗ್ ನೀಡಿದ್ದಾರೆ.