ಬೆಂಗಳೂರು: ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿವೆ.
ಮೈಸೂರು ಬ್ಯಾಂಕ್ ವೃತ್ತದಿಂದ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನಾ ರ್ಯಾಲಿ ನಡೆಸಲು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಬಣ ನಿರ್ಧರಿಸಿದೆ. ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.
ವರನಟ ಡಾ.ರಾಜ್ ಕುಟುಂಬದ ಮೂರನೇ ಕುಡಿ `ಗಂಧದ ಗುಡಿ’ ಪ್ರವೇಶ
ಹಿಂದಿ ಭಾಷೆಯಲ್ಲಿ ನಮ್ಮ ಕನ್ನಡ ಚಿತ್ರ ಹೆಚ್ಚು ರಿಲೀಸ್ ಆಗುತ್ತಿಲ್ಲ. ಹಿಂದಿ ಸಿನಿಮಾಗಳು ನಮ್ಮಲ್ಲಿ ಬಿಡುಗಡೆಯಾಗುತ್ತಿವೆ. ಹಿಂದಿ ಸಿನಿಮಾಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದ ನಟ ಕಿಚ್ಚ ಸುದೀಪ್ ಗೆ ತಿರುಗೇಟು ನೀಡಿದ್ದ ಅಜಯ್ ದೇವಗನ್, ಹಿಂದಿ ರಾಷ್ಟ್ರ ಭಾಷೆಯಲ್ಲ ಎನ್ನುವುದಾದರೆ ಕನ್ನಡ ಸಿನಿಮಾಗಳನ್ನು ಯಾಕೆ ಹಿಂದಿಯಲ್ಲಿ ಡಬ್ ಮಾಡಿ ರಿಲೀಸ್ ಮಾಡುತ್ತೀರಿ ? ಹಿಂದಿ ರಾಷ್ಟ್ರ ಭಾಷೆ. ರಾಷ್ಟ್ರಭಾಷೆಯಾಗಿಯೇ ಉಳಿಯುತ್ತದೆ ಎಂದಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಕರವೇ, ಅಜಯ್ ದೇವಗನ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ.