ಬಾಗಲಕೋಟೆ: ಹಿಜಾಬ್, ಹಲಾಲ್, ಆಜಾನ್ ವಿವಾದ ಬಳಿಕ ಇದೀಗ ಹೊಸದೊಂದು ವಿವಾದ ಆರಂಭವಾಗಿದ್ದು, ಅಕ್ಷಯ ತೃತೀಯದಂದು ಮುಸ್ಲಿಂ ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಖರೀದಿ ಮಾಡಬೇಡಿ ಎಂಬ ಹೊಸ ಅಭಿಯಾನವನ್ನು ಹಿಂದೂ ಪರ ಸಂಘಟನೆಗಳು ಆರಂಭಿಸಿವೆ.
ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲ್ಲರಿ ಅಂಗಡಿಯಲ್ಲಿ ಬಂಗಾರ ಖರೀದಿಸಿ ಎಂದು ಟ್ವಿಟರ್ ನಲ್ಲಿ ಅಭಿಯಾನ ಆರಂಭವಾಗಿದ್ದು, ಈ ಅಭಿಯಾನಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೆಂಬಲ ನೀಡಿದ್ದಾರೆ.
ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂ ಮಾಲಿಕತ್ವದ ಜ್ಯುವೆಲ್ಲರಿ ಮಳಿಗೆಗಳಿದ್ದು ಅದರಲ್ಲಿ ಚಿನ್ನ ಖರೀದಿಸಬಾರದು ಎಂದು ಮುತಾಲಿಕ್ ಕರೆ ನೀಡಿದ್ದಾರೆ. ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ಚಿನ್ನದ ಅಭರಣ ಖರೀದಿಸುವಾಗ ಈ ಅಂಶಗಳನ್ನು ಹಿಂದೂಗಳು ಗಮನದಲ್ಲಿ ಇರಿಸಿಕೊಳ್ಳಬೇಕು. ಮಾಲಿಕತ್ವ ಯಾರದ್ದೆಂದು ತಿಳಿಯದೇ ಚಿನ್ನ ಖರೀದಿಸಿದರೆ ಅದರ ಲಾಭ ಕೇರಳ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತದೆ. ಅಕ್ಷಯ ತೃತೀಯದಂದು ಹಿಂದೂ ಮಾಲೀಕತ್ವದ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನ ಖರೀದಿಸುವಂತೆ ತಿಳಿಸಿದ್ದಾರೆ.