ಅಕ್ರಮ ಸಂಬಂಧ ಹೊಂದಿದ ವ್ಯಕ್ತಿಯೊಬ್ಬ ಇದನ್ನು ಪತ್ನಿ ಪ್ರಶ್ನಿಸಿದಳೆಂಬ ಕಾರಣಕ್ಕೆ ಆಕೆಯನ್ನು ಮಕ್ಕಳ ಮುಂದೆಯೇ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
27 ವರ್ಷದ ಯೋಗಿತ ಮೃತ ದುರ್ದೈವಿಯಾಗಿದ್ದು ಈಕೆಯನ್ನು ಪತಿ ರವಿ ಹತ್ಯೆ ಮಾಡಿದ್ದಾನೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಪತ್ನಿ ತನ್ನ ಪತಿಯ ಅಕ್ರಮ ಸಂಬಂಧದ ಕುರಿತು ಪ್ರಶ್ನಿಸಿದ ವೇಳೆ ಮಕ್ಕಳ ಮುಂದೆ ಥಳಿಸಿದ ಆತ ಬಳಿಕ ರೂಮಿನೊಳಗೆ ಎಳೆದುಕೊಂಡು ಹೋಗಿದ್ದಾನೆ.
ಇದರಿಂದ ಗಾಬರಿಗೊಂಡ ಮಕ್ಕಳು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದು, ಅವರು ಬರುವಷ್ಟರಲ್ಲಿಯೇ ಯೋಗಿತಾಳ ಹತ್ಯೆ ಮಾಡಿದ್ದ ರವಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದೀಗ ಅರಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.