ಕೊಪ್ಪಳ: ಕೊಪ್ಪಳದ ಇಂದ್ರಕಿಲಾ ಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಪತ್ನಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕಾಂಗ್ರೆಸ್ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಸೈಯದ್ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಇದೀಗ ಪತಿ ಮಾಡಿದ ತಪ್ಪಿಗೆ ಪತ್ನಿ ವಿರುದ್ಧ ದೂರು ದಾಖಲಾಗಿದೆ.
ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ನಿಯಮ ಗಾಳಿಗೆ ತೂರಿ ಕಾಂಗ್ರೆಸ್ ಮುಖಂಡ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಸೈಯದ್ ಪತ್ನಿ ಸಿಮ್ರಾನ್ ಸೈಯದ್ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಮ್ರಾನ್ ಹೆಸರಿನ ಸರ್ವೆ ನಂಬರ್ 656, 4 ಎಕರೆ, 16 ಗುಂಟೆಯ ಪಟ್ಟಾ ಭೂಮಿಯಲ್ಲಿ ಅನಧಿಕೃತ ಗಣಿಗಾರಿಕೆ ಹಾಗೂ ಬ್ಲಾಸ್ಟಿಂಗ್ ನಡೆದಿದ್ದು, ಅನಧಿಕೃತ ಗಣಿಗಾರಿಕೆಯಿಂದ ಬೆಟ್ಟದ ಪರಿಸರ ಹಾಗೂ ಐತಿಹಾಸಿಕ ಶಾಸನಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ.