ಆಂಬುಲೆನ್ಸ್ ಸಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ಮೋದಿಯವರ ಸೂಚನೆಯಂತೆ ನಿಂತು ದಾರಿ ಮಾಡಿಕೊಟ್ಟಿದೆ.
ಭಾನುವಾರ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರದ ಅಂತಿಮ ಹಂತದಲ್ಲಿ ಹಿಮಾಚಲ ಪ್ರದೇಶದ ಕಾಂಗ್ರಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಬೆಂಗಾವಲು ಪಡೆ ಆಂಬುಲೆನ್ಸ್ ಹಾದುಹೋಗಲು ರಸ್ತೆಯಲ್ಲೇ ನಿಂತಿತು.
ಆಂಬ್ಯುಲೆನ್ಸ್ ಹಾದುಹೋಗಲು ಪ್ರಧಾನಿ ಬೆಂಗಾವಲು ಪಡೆ ಕಾಯುತ್ತಿರುವ ವಿಡಿಯೋ ಹರಿದಾಡ್ತಿದೆ. ಆಂಬ್ಯುಲೆನ್ಸ್ ಹಾದುಹೋದ ನಂತರ ವಿವಿಐಪಿ ಬೆಂಗಾವಲು ಪಡೆಗೆ ದಾರಿಯನ್ನು ತೆರವುಗೊಳಿಸುವ ಕಾರ್ಯವನ್ನು ನಿರ್ವಹಿಸುವ ಭದ್ರತಾ ಸಿಬ್ಬಂದಿ ಚಾಲಕನಿಗೆ ತಿಳಿಸಿದ್ದು, ಪ್ರಧಾನಿ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ. ಈ ವೇಳೆ ಮೋದಿ ಅವರನ್ನು ಅಭಿನಂದಿಸಲು ನೆರೆದಿದ್ದ ಬೆಂಬಲಿಗರತ್ತ ಅವರು ಕೈ ಬೀಸಿದ್ದಾರೆ.
ಇದಕ್ಕೂ ಮೊದಲು ಕಳೆದ ತಿಂಗಳು ಗುಜರಾತ್ ಭೇಟಿಯ ವೇಳೆ ಆಂಬುಲೆನ್ಸ್‌ಗೆ ಹೋಗಲು ಅವಕಾಶ ಮಾಡಿಕೊಡಲು ಪ್ರಧಾನಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದ್ದರು. ಆಗ ಪ್ರಧಾನಿಯವರು ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ಪ್ರಯಾಣಿಸುತ್ತಿದ್ದರು.
ಹಿಮಾಚಲ ಪ್ರದೇಶದ ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಚಾರದ ಕೊನೆಯ ಹಂತದ ಪ್ರಚಾರಕ್ಕಾಗಿ ಪ್ರಧಾನಿಯವರು ಹಿಮಾಚಲ ಪ್ರದೇಶದಲ್ಲಿದ್ದಾರೆ.
ಇಂದು ಕಾಂಗ್ರಾದ ಚಂಬಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಹಿಮಾಚಲ ಪ್ರದೇಶಕ್ಕೆ ಡಬಲ್ ಇಂಜಿನ್ ನ ಸ್ಥಿರ ಮತ್ತು ಬಲವಾದ ಸರ್ಕಾರದ ಅಗತ್ಯವಿದೆ ಎಂದು ಹೇಳಿದರು.