ಉಡುಪಿ: ಇಂದು ವಿಶ್ವ ಅಂಗಾಂಗ ದಾನ ದಿನವಾಗಿದ್ದು, ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕರೆ ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅಂಗಾಂಗ ದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಬಹುದು. ಅಂಗಾಂಗ ದಾನ ಮಾಡುವುದರಿಂದ ನಮ್ಮಿಂದ ಒಂದು ಜೀವ ಉಳಿಯುತ್ತದೆ ಎನ್ನುವುದಾದರೆ ಯಾಕೆ ಮಾಡಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡೋಣ ಎಂದರು.
BIG NEWS: ಟಫ್ ರೂಲ್ಸ್ ಸುಳಿವು ನೀಡಿದ ಸಿಎಂ ಬೊಮ್ಮಾಯಿ; ಆ.15ರ ಬಳಿಕ ಜಾರಿಯಾಗುತ್ತಾ ಬಿಗಿ ಕ್ರಮ…?
ನಮ್ಮ ಕಿಡ್ನಿ, ಹಾರ್ಟ್, ಲಿವರ್ ನಮ್ಮ ಮರಣಾ ನಂತರ ಮತ್ತೊಬ್ಬರಿಗೆ ಜೀವ ನೀಡುತ್ತದೆ. ಹಾಗಾಗಿ ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು. ಇಂದು ವಿಶ್ವ ಅಂಗಾಂಗ ದಾನ ದಿನದ ಹಿನ್ನೆಲೆಯಲ್ಲಿ ನಾನು ಅಂಗಾಂಗ ದಾನಕ್ಕೆ ಸಹಿ ಹಾಕಲು ನಿರ್ಧರಿಸಿದ್ದೇನೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ಕೆ ಮುಂದಾಗಿ ಎಂದು ಮನವಿ ಮಾಡಿದರು.