ಚೆನ್ನೈ ಮೂಲದ ವುಮ್ಮುಡಿ ಬಂಗಾರು ಜ್ಯುವೆಲರ್ಸ್‌ನ (ವಿಬಿಜೆ) ಒಂದು ನಿಮಿಷದ ವೀಡಿಯೊ ಪ್ರಧಾನಿ ಮೋದಿ ಅವರ ಕಣ್ಸೆಳೆದಿದೆ. ನೆಹರೂ ಅವರ ವಾಕಿಂಗ್ ಸ್ಟಿಕ್ ಎಂದು ತಪ್ಪಾಗಿ ಅರ್ಥೈಸಲಾಗಿದ್ದ ಸೆಂಗೊಲ್ ಇತಿಹಾಸವನ್ನು ಬಹಿರಂಗಪಡಿಸಿದೆ.
1947 ರಲ್ಲಿ ಬ್ರಿಟಿಷರಿಂದ ಅಧಿಕಾರ ಹಸ್ತಾಂತರದ ಸಂಕೇತವಾದ ಐದು ಅಡಿ ಉದ್ದದ ಚಿನ್ನದ ರಾಜದಂಡ ಅಥವಾ ‘ಸೆಂಗೊಲ್’ ಪ್ರಧಾನಿ ನರೇಂದ್ರ ಮೋದಿಯವರ ಕಣ್ಣಿಗೆ ಬಿದ್ದಿದ್ದು, ಚೆನ್ನೈ ಮೂಲದ ಅಲಹಾಬಾದ್ ವಸ್ತುಸಂಗ್ರಹಾಲಯದಿಂದ ಇದನ್ನು ಹಿಂಪಡೆಯಲಾಗಿದೆ.
ದಶಕಗಳಿಂದಲೂ ಇದನ್ನು ನೆಹರೂ ಅವರ ‘ಗೋಲ್ಡನ್ ವಾಕಿಂಗ್ ಸ್ಟಿಕ್’ ಎಂದು ತಪ್ಪಾಗಿ ಕರೆಯಲಾಗುತ್ತಿತ್ತು. 2018 ರಲ್ಲಿ ಮ್ಯಾಗಜೀನ್‌ನಲ್ಲಿ ಅದರ ಇತಿಹಾಸದ ಬಗ್ಗೆ ಓದುವವರೆಗೂ ‘ಸೆಂಗೊಲ್’ ಕಥೆಯ ಬಗ್ಗೆ ತಿಳಿದಿರಲಿಲ್ಲ. 2019 ರಲ್ಲಿ ಮ್ಯೂಸಿಯಂನಲ್ಲಿ ಅದು ಪತ್ತೆಯಾಗಿತ್ತು. ಬಳಿಕ ಅಲಹಾಬಾದ್ ಮ್ಯೂಸಿಯಂ ಅಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು, ಆದರೆ ಕೋವಿಡ್‌ನಿಂದಾಗಿ ಅದು ಸಾಧ್ಯವಾಗಿರಲಿಲ್ಲ. ನಂತರ ಪ್ರಧಾನಿ ಮೋದಿ ಅವರ ಗಮನ ಸೆಳೆಯಲು 1 ನಿಮಿಷದ ವಿಡಿಯೋ ಮಾಡಲಾಯ್ತು ಅಂತಾ ವಿಬಿಜೆ ವ್ಯವಸ್ಥಾಪಕ ನಿರ್ದೇಶಕ ಅಮರೇಂದ್ರನ್ ವುಮ್ಮುಡಿ ಹೇಳಿದ್ದಾರೆ.
ವುಮ್ಮುಡಿ ಕುಟುಂಬವು ‘ಸೆಂಗೊಲ್’ ಅನ್ನು ಮರೆತಿದೆ. ಬಂಗಾರು ಚೆಟ್ಟಿ ಅವರು 100 ಸವರನ್ ಚಿನ್ನದಿಂದ ‘ಸೆಂಗೊಲ್’ ತಯಾರಿಸಿದರು ಮತ್ತು ಇದಕ್ಕಾಗಿ 15,000 ರೂಪಾಯಿ ಪಡೆದಿದ್ದರು. ಒಂದು ತಿಂಗಳೊಳಗೆ ಅದನ್ನು ಸಿದ್ಧಪಡಿಸಿದ್ದರಂತೆ. ಸೆಂಗೊಲ್ ತಯಾರಿಸಿದ ಬಂಗಾರು ಈಗ ಬದುಕಿಲ್ಲ. ಅವರ ಮಗ ವುಮ್ಮುಡಿ ಎಥಿರಾಜ್‌ಗೆ ಸ್ವಾತಂತ್ರ್ಯದ ಸಮಯದಲ್ಲಿ 22 ವಯಸ್ಸು. ಸೆಂಗೊಲ್ ಅನ್ನು ದೆಹಲಿಗೆ ಕಳುಹಿಸುವ ಮುನ್ನ ಮದ್ರಾಸ್ ಪ್ರೆಸಿಡೆನ್ಸಿಯ ಹಿರಿಯ ಅಧಿಕಾರಿಗಳು ಅಲ್ಲಿಗೆ ಭೇಟಿ ಅದನ್ನು ವೀಕ್ಷಿಸಿದ್ದರು.
ವುಮ್ಮುಡಿ ಬಂಗಾರು ಜ್ಯುವೆಲರ್ಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಅದನ್ನು ಮ್ಯೂಸಿಯಂನಲ್ಲಿ ಗಮನಿಸಿದ್ದರು. ಅದರ ಮೇಲೆ ನೆಹರೂರವರಿಗೆ ಉಡುಗೊರೆಯಾಗಿ ಸಿಕ್ಕಿದ ಚಿನ್ನದ ಕೋಲು ಎಂದು ಬರೆಯಲಾಗಿತ್ತು. ಇದನ್ನು ಗಮನಿಸಿದ ಆತ ಪತ್ರಕರ್ತ ಎಸ್. ಗುರುಮೂರ್ತಿ ಮತ್ತು ತಮಿಳುನಾಡಿನ ಇತಿಹಾಸ ತಜ್ಞ ಶೈವಿತೆ ಮಠ ಅವರ ನೆರವಿನೊಂದಿಗೆ ಸೆಂಗೊಲ್‌ನ ಪ್ರತಿರೂಪವನ್ನು ನಿರ್ಮಿಸಿದರು. ಇದಾಗಿ ತಿಂಗಳು ಕಳೆಯುವಷ್ಟರಲ್ಲಿ ಇಂದಿರಾ ಗಾಂಧಿ ನ್ಯಾಶನಲ್ ಸೆಂಟರ್ ಫಾರ್ ಆರ್ಟ್ಸ್, ಎರಡನೇ ಬಾರಿಗೆ ಸೆಂಗೊಲ್‌ಗಾಗಿ ಬುಕ್ಕಿಂಗ್ ಮಾಡಿತ್ತು.
ಈ ಬಾರಿ ಅದನ್ನು ಬೆಳ್ಳಿಯಲ್ಲಿ ನಿರ್ಮಾಣ ಮಾಡಿ ಚಿನ್ನದ ಎರಕ ಹೊಯ್ಯಲಾಗಿತ್ತು. ಅದನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ. ಚಿನ್ನದ ಸೆಂಗೊಲ್ ಅನ್ನು ಸಂಸತ್‌ನಲ್ಲಿ ಪ್ರತಿಷ್ಠಾಪಿಸಲಾಗುವುದು. ಮೂವರು ಅಕ್ಕಸಾಲಿಗರು ಕೇವಲ 8 ದಿನಗಳಲ್ಲಿ ಸೆಂಗೊಲ್ ಅನ್ನು ಸಿದ್ಧಪಡಿಸಿದ್ದಾರೆ. ಮೇ 28ರಂದು ಹೊಸ ಸಂಸತ್ ಭವನದ ಉದ್ಘಾಟನೆ ನಡೆಯಲಿದ್ದು, ವುಮ್ಮುಡಿ ಜ್ಯುವೆಲರ್ಸ್ ಕುಟುಂಬದ 8 ಮಂದಿಯನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.