ಇನ್ಮೇಲೆ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಲು ಹಣ ಕೊಟ್ಟು ಟಿಕೆಟ್ ಖರೀದಿ ಮಾಡಬೇಕಾಗಿಲ್ಲ. ಇದಕ್ಕಾಗಿಯೇ ಡಿಜಿಟಲ್ ಪಾಸ್ ಗಳನ್ನು ಬಿಎಂಟಿಸಿ ಬಿಡುಗಡೆ ಮಾಡಿದೆ. Tummoc ಒದಗಿಸಿರುವ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಡೈಲಿ, ವೀಕ್ಲಿ ಅಥವಾ ಮಂತ್ಲಿ ಡಿಜಿಟಲ್ ಪಾಸ್ ಗಳನ್ನು ಖರೀದಿ ಮಾಡಬಹುದು.
ನಗದು ರಹಿತ, ಪೇಪರ್ ರಹಿತ ಮತ್ತು ಸಂಪರ್ಕ ರಹಿತ ವಹಿವಾಟು ಇದಾಗಿದ್ದು, ಯಾವುದೇ ಗೊಂದಲ, ರಶ್ ಇಲ್ಲದೇ ಪ್ರಯಾಣಿಕರು ಆರಾಮಾಗಿ ಪಾಸ್ ತೆಗೆದುಕೊಳ್ಳಬಹುದು. ಈಗ ಪ್ರತಿಯೊಬ್ಬರ ಕೈಲೂ ಮೊಬೈಲ್ ಇದ್ದೇ ಇರುತ್ತದೆ. ಮೊಬೈಲ್ ಅಪ್ಲಿಕೇಶನ್ ಮೂಲಕವೇ ಕ್ಷಣಮಾತ್ರದಲ್ಲಿ ಪಾಸ್ ಗಳನ್ನು ಖರೀದಿ ಮಾಡಬಹುದು.
ಹಣ ಪಾವತಿ ಮಾಡಿದ ನಂತರ, ಪಾಸ್ ನ ವ್ಯಾಲಿಡಿಯನ್ನು ಚೆಕ್ ಮಾಡಿಕೊಳ್ಳಿ. ಯೂನಿಕ್ ಐಡಿ, ವ್ಯಾಲಿಡಿಟಿ ಮತ್ತು ಡೈನಾಮಿಕ್ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾಸ್ ಜನರೇಟ್ ಮಾಡಲಾಗುತ್ತದೆ.
ಮೊಬೈಲ್ ನಲ್ಲಿರೋ ಡಿಜಿಟಲ್ ಪಾಸ್ ಅನ್ನು ಪ್ರಯಾಣಿಕರು ಬಸ್ ಕಂಡಕ್ಟರ್ ಗೆ ತೋರಿಸಬೇಕು. ಎಲೆಕ್ಟ್ರಿಕ್ ಟಿಕೆಟಿಂಗ್ ಮಷಿನ್ ಮೂಲಕ ಕಂಡಕ್ಟರ್, ಟಿಕೆಟ್ ಅನ್ನು ಪರಿಶೀಲನೆ ಮಾಡ್ತಾರೆ.
2019ರಲ್ಲಿ ವೋಲ್ವೋ, ವಜ್ರ ಎಸಿ ಬಸ್ ಗಳಿಗಾಗಿ ಬಿಎಂಟಿಸಿ ತಮ್ಮ ಪಾಸ್ ಅನ್ನು ಬಿಡುಗಡೆ ಮಾಡಲಾಗಿತ್ತು. ಅದು ಕೂಡ ಡಿಜಿಟಲ್ ಟಿಕೆಟ್ ಪಾಸ್ ಆಗಿತ್ತು. ಆದ್ರೆ ಬಳಿಕ ಪಾಲಿಕೆಯೇ ಅದನ್ನು ರದ್ದು ಮಾಡಿತ್ತು.