ಬೆಂಗಳೂರು: ಅನ್ನಭಾಗ್ಯ ಯೋಜನೆ ಅಕ್ಕಿ ವಿಚಾರವಾಗಿ ಕೇಂದ್ರ ಸರ್ಕಾರದ ಮೂರು ಏಜೆನ್ಸಿಗಳಿಗೆ ಸಲಹೆಗಳನ್ನು ನೀಡಿದ್ದೆವು. ಅವರು ಒಂದು ವಾರ ಸಮಯಾವಕಾಶ ಕೇಳಿದ್ದಾಗಿ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಅನ್ನಭಾಗ್ಯ ಅಕ್ಕಿ ಯೋಜನೆ ಸಭೆ ಬಳಿಕ ಮಾತನಾಡಿದ ಸಚಿವರು, ಅಕ್ಕಿ ದರ ನಿಗದಿ ಮಾಡುವುದು ಈ ಮೂರು ಏಜೆನ್ಸಿಗಳಿಗೆ ಬಿಟ್ಟದ್ದು. ಒಂದು ವಾರದೊಳಗೆ ಟ್ರೇಡರ್ಸ್, ಮಿಲ್ಲರ್ಸ್ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಈ ಹಿಂದೆಯೂ ರಾಜ್ಯದಲ್ಲಿ ಇದೇ ಸಂಸ್ಥೆಗಳಿಂದ ಅಕ್ಕಿ ತರಿಸಲಾಗಿತ್ತು. ಸಂಸ್ಥೆಗಳಿಗೆ ಅಕ್ಕಿ ಪೂರೈಕೆ ಬಳಿಕ ಸರ್ಕಾರಕ್ಕೆ ಅಕ್ಕಿ ಸರಬರಾಜಾಗುತ್ತದೆ. ನಾವು ಕೊಟ್ಟ ಭರವಸೆಯಂತೆ 10 ಕೆಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ ಎಂದು ಹೇಳಿದರು.