ಯಾದಗಿರಿ: ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಿಂಚಿನ ಸಂಚಾರ ಮೂಡಿಸಿದೆ. ವಿಧಾನಸಬಾ ಚುನಾವಣೆ ಸಮೀಪಿಸಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಪ್ರಧಾನಿ ಮೋದಿ ಮೂಲಕವಾಗಿ ಮತಬೇಟೆಗೆ ಮುಂದಾಗಿದೆ.
ವಿವಿವಿಧ ನೀರಾವರಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಆಧುನಿಕರಣಗೊಂಡಿರುವ ನಾರಾಯಣಪುರ ಎಡದಂಡೆ ಕಾಲುವೆ ಲೋಕಾರ್ಪಣೆ ಮಾಡಿದರು. ಈ ಕಾಲುವೆ ಪುನಶ್ಚೇತನ, ಆಧುನಿಕರಣ , ವಿಸ್ತರಣೆ ಸೇರಿ 4,699 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗಿದೆ. 10 ಸಾವಿರ ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯವಿರುವ ಕಾಲುವೆ ಇದಾಗಿದ್ದು ವಿಜಯಪುರ, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ನೀರು ಒದಗಿಸಲಿದೆ.
ಇದೇ ವೇಳೆ ಪ್ರಧಾನಿ ಮೋದಿ ಬಹಿಉಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿದರು. 2004 ಕೋಟಿ ಮೊತ್ತದಲ್ಲಿ ಹಲವು ಕಾಮಗಾರಿಗಳು ನಿರ್ವಹಿಸಲಾಗುತ್ತಿದೆ. ಈ ಯೋಜನೆಯಿಂದ 710 ಗ್ರಾಮೀಣ ವಸತಿ ಪ್ರದೇಶಗಳು 3 ಪಟ್ಟಣಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.
ಸೂರತ್ – ಚೆನ್ನೈ ಹೆದ್ದಾರಿ ಶಿಲನ್ಯಾಸ ನೆರವೇರಿಸಿದರು. ಯಾದಗಿರಿ ಮತ್ತು ಕಲಬುರ್ಗಿ ಮಾರ್ಗವಾಗಿ ಹಾದುಹೋಗುವ ಸೂರತ್-ಚೆನ್ನೈ ಹೆದ್ದಾರಿಯ ಹಲವು ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಲಾಯಿತು.