ಲಂಡನ್: ಸ್ವತಃ ಆರೋಗ್ಯ ಸಚಿವರು ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡುವ ಮೂಲಕ ಸಚಿವ ಸ್ಥಾನವನ್ನೇ ಕಳೆದುಕೊಂಡಿರುವ ಘಟನೆ ಬ್ರಿಟನ್ ನಲ್ಲಿ ನಡೆದಿದೆ.
ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳುವ ಆರೋಗ್ಯ ಸಚಿವರು ಸ್ವತಃ ನಿಯಮಗಳನ್ನು ಪಾಲಿಸಿ ಜನರಿಗೆ ಮಾದರಿಯಾಗುವ ಬದಲು ಮಾರ್ಗಸೂಚಿ ಉಲ್ಲಂಘನೆ ಮಾಡಿ ಸಹೋದ್ಯೋಗಿಗೆ ಚುಂಬನ ನೀಡಿದ ಬೆನ್ನಲ್ಲೇ ಇದೀಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಸಂಗ ನಡೆದಿದೆ.
BANK ALERT…! ಜುಲೈ 1 ರಿಂದ ಬದಲಾದ IFSC ಕೋಡ್ ಬಳಕೆಗೆ ಗ್ರಾಹಕರಿಗೆ ಸೂಚಿಸಿದ BOB
ಬ್ರಿಟನ್ ಆರೋಗ್ಯ ಸಚಿವರು ತಮ್ಮ ಕಚೇರಿಯಲ್ಲಿಯೇ ಸಹೋದ್ಯೋಗಿಗೆ ಚುಂಬಿಸಿದ ಫೋಟೋಗಳು ವೈರಲ್ ಆಗಿದ್ದು, ತಮ್ಮ ವರ್ತನೆಯಿಂದ ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂಬುದನ್ನು ಸ್ವತಃ ಮ್ಯಾಟ್ ಹಾನ್ ಕಾಕ್ ಒಪ್ಪಿಕೊಂಡಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಕ್ ಮೂಲದ ಸಂಸತ್ ಸದಸ್ಯ ಸಾಜಿದ್ ಜಾವಿದ್ ಬ್ರಿಟನ್ ನೂತನ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.