ವ್ಯಕ್ತಿಯೊಬ್ಬರು ಹವ್ಯಾಸಕ್ಕಾಗಿ ಸಮುದ್ರ ತೀರದಲ್ಲಿ ಗಾಳ ಹಾಕಿ ಕುಳಿತಿದ್ದ ವೇಳೆ ಬೃಹತ್ ಗಾತ್ರದ ಎರಡು ಮೀನುಗಳು ಸಿಕ್ಕಿರುವ ಘಟನೆ ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ಸಮುದ್ರ ತೀರದಲ್ಲಿ ನಡೆದಿದೆ.
ವೃತ್ತಿಯಲ್ಲಿ ಕೇಬಲ್ ಆಪರೇಟರ್ ಆಗಿರುವ ನಾಗೇಶ್ ಎಂಬವರು ಭಾನುವಾರದಂದು ಗಾಳ ಹಾಕಿ ಕುಳಿತಿದ್ದ ವೇಳೆ 25 ಕೆಜಿ ತೂಕದ ಮುರು ಮೀನು ಹಾಗೂ 15 ಕೆಜಿ ತೂಕದ ಕೊಕ್ಕರ್ ಮೀನು ಅವರ ಗಾಳಕ್ಕೆ ಸಿಕ್ಕಿ ಬಿದ್ದಿವೆ.
ಕಡಲ ಕೊರೆತ ತಡೆಗಾಗಿ ಈ ಭಾಗದಲ್ಲಿ ಬೃಹತ್ ಗಾತ್ರದ ಬಂಡೆಗಳನ್ನು ಸಮುದ್ರ ತೀರಕ್ಕೆ ಹಾಕಲಾಗಿದ್ದು ವಾರಾಂತ್ಯದ ದಿನಗಳನ್ನು ಇಲ್ಲಿ ಅನೇಕರು ಮೀನು ಹಿಡಿಯಲು ಬರುತ್ತಾರೆ. ಹಾಗೆಯೇ ನಾಗೇಶ್ ಸ್ನೇಹಿತರೊಂದಿಗೆ ಹೋದಾಗ ಸಾವಿರಾರು ರೂಪಾಯಿ ಬೆಲೆ ಬಾಳುವ ಈ ಮೀನುಗಳು ಸಿಕ್ಕಿವೆ.