ಮಹಾಮಾರಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ತಂಗಿಗಾಗಿ ಅಣ್ಣನೊಬ್ಬ ತಲೆ ಬೋಳಿಸಿಕೊಂಡ ಭಾವುಕಗೊಳಿಸುವ ಘಟನೆಯೊಂದು ನಡೆದಿದೆ.
ಕ್ಯಾನ್ಸರ್ ಚಿಕಿತ್ಸೆ ಸಂದರ್ಭದಲ್ಲಿ ಕೂದಲು ಉದುರುತ್ತದೆ. ಈ ವೇಳೆ ಸಹಜವಾಗಿ ಕ್ಯಾನ್ಸರ್ ಪೀಡಿತರು ಕುಗ್ಗಿ ಹೋಗುತ್ತಾರೆ, ಎಂತಹ ಗಟ್ಟಿಗರೂ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಹೋದರನೊಬ್ಬ ತನ್ನ ಸಹೋದರಿಯ ತಲೆ ಕೂದಲು ಟ್ರಿಮ್ ಮಾಡುತ್ತಿರುತ್ತಾನೆ. ಆತ ಇದ್ದಕ್ಕಿದ್ದಂತೆ ತನ್ನ ತಲೆ ಬೋಳಿಸಿಕೊಳ್ಳಲು ಪ್ರಾರಂಭಿಸುತ್ತಾನೆ. ಇದನ್ನು ನೋಡಿದ ಸಹೋದರಿ ಆತನ ಮೇಲೆ ಒರಗಿ ಕಣ್ಣೀರು ಹಾಕುತ್ತಾಳೆ. ಅದೊಂದು ಭಾವನಾತ್ಮಕ ಕ್ಷಣ. ಸ್ವಲ್ಪ ಸಮಯದ ನಂತರ, ಏಕೆ ತನ್ನ ಸಹೋದರನಿಗೆ ತಲೆ ಬೋಳಿಸಲು ಸಹಾಯ ಮಾಡಿದ್ದಾಳೆ.
ಯಾರೂ ಏಕಾಂಗಿಯಾಗಿ ಹೋರಾಡುವುದಿಲ್ಲ: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಸಹೋದರಿಯೊಂದಿಗೆ ಒಗ್ಗಟ್ಟಿನಿಂದ ಸಹೋದರ ತಲೆ ಬೋಳಿಸಿಕೊಳ್ಳುತ್ತಾನೆ ಎಂಬ ಶೀರ್ಷಿಕೆಯನ್ನು ವಿಡಿಯೋಗೆ ನೀಡಲಾಗಿದೆ.
https://twitter.com/BarbaraLoo3/status/1580355867064487938?ref_src=twsrc%5Etfw%7Ctwcamp%5Etweetembed%7Ctwterm%5E1580355867064487938%7Ctwgr%5Eccd810b882caf17329426a635f579b246377f9cf%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fbig-brother-shaves-his-head-in-solidarity-with-sister-battling-cancer-video-will-make-you-cry-2284837-2022-10-13