ಅಣ್ಣ-ತಂಗಿಯರ ಬಾಂಧವ್ಯವನ್ನು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿಯೇ ಇರುತ್ತೇವೆ. ಇದೇ ಪಟ್ಟಿಗೆ ಸೇರುವ ಮತ್ತೊಂದುವ ವಿಡಿಯೋ ವೈರಲ್ ಆಗಿದೆ.
ಮಳೆಯಿಂದ ತನ್ನ ಪುಟ್ಟ ತಂಗಿಯನ್ನು ರಕ್ಷಿಸಿಕೊಂಡು ಕರೆದೊಯ್ಯುತ್ತಿರುವ ಅಣ್ಣನಿಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
ಸಿಸಿ ಟಿವಿ ಈಡಿಯಟ್ಸ್ ಹೆಸರಿನ ಚಾನೆಲ್ ಒಂದರಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಬಾಲಕನೊಬ್ಬ ತನ್ನ ತಂಗಿಯನ್ನು ಟೀ-ಶರ್ಟ್ ಒಳಗೆ ಬಚ್ಚಿಟ್ಟುಕೊಂಡು ತನ್ನ ಕೈಗಳಲ್ಲಿ ಆಕೆಯನ್ನು ಎತ್ತಿಕೊಂಡು ಮಳೆಯಿಂದ ರಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ.
https://twitter.com/cctvidiots/status/1652002595857399808?ref_src=twsrc%5Etfw%7Ctwcamp%5Etweetembed%7Ctwterm%5E1652002595857399808%7Ctwgr%5E196135a2cdf67125a6780744dbc0fed17809d92b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fbig-brother-protects-little-sister-from-rain-in-super-cute-viral-video-internet-cant-help-but-go-aww-2366249-2023-04-29