ನವದೆಹಲಿ : ಕೇಂದ್ರ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ.ನಿತಿನ್ ಗಡ್ಕರಿಗೆ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ ನೀಡಲಾಗಿದೆ. ಈ ಮೂಲಕ ಸತತ ಮೂರನೇ ಅವಧಿಗೆ ನಿತಿನ್ ಗಡ್ಕರಿ ಹೆದ್ದಾರಿ ಖಾತೆ ನಿರ್ವಹಿಸಲಿದ್ದಾರೆ.
ಯಾರಿಗೆ ಯಾವ ಖಾತೆ..?
*ಗೃಹ ಸಚಿವಾಲಯ- ಅಮಿತ್ ಶಾ
*ರಕ್ಷಣಾ ಸಚಿವಾಲಯ- ರಾಜನಾಥ್ ಸಿಂಗ್
*ವಿದೇಶಾಂಗ ವ್ಯವಹಾರಗಳ ಸಚಿವಾಲಯ- ಡಾ.ಎಸ್.ಜೈಶಂಕರ್
*ಹಣಕಾಸು – ನಿರ್ಮಲಾ ಸೀತಾರಾಮನ್
*ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ – ಶಿವರಾಜ್ ಸಿಂಗ್ ಚೌಹಾಣ್
*ಎಂಒಆರ್ಟಿಎಚ್ – ನಿತಿನ್ ಗಡ್ಕರಿ
*ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಮತ್ತು ಹೊಸ ಇಂಧನ – ಮನೋಹರ್ ಲಾಲ್ ಖಟ್ಟರ್
*ವಾಣಿಜ್ಯ ಸಚಿವಾಲಯ – ಪಿಯೂಷ್ ಗೋಯಲ್
*ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ – ಹರ್ದೀಪ್ ಸಿಂಗ್ ಪುರಿ
*ರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ – ಅಶ್ವಿನಿ ವೈಷ್ಣವ್
*ಶಿಕ್ಷಣ ಸಚಿವಾಲಯ – ಧರ್ಮೇಂದ್ರ ಪ್ರಧಾನ್
*ಆರೋಗ್ಯ ಸಚಿವಾಲಯ – ಜೆ.ಪಿ.ನಡ್ಡಾ
*ಕಾರ್ಮಿಕ ಮತ್ತು ಕ್ರೀಡೆ – ಮನ್ಸುಖ್ ಮಾಂಡವಿಯಾ
*ಪರಿಸರ ಸಚಿವಾಲಯ – ಭೂಪೇಂದ್ರ ಯಾದವ್
*ನಾಗರಿಕ ವಿಮಾನಯಾನ – ರಾಮ್ ಮೋಹನ್ ಯಾದವ್
*ಸಂಸದೀಯ ವ್ಯವಹಾರಗಳು – ಕಿರಣ್ ರಿಜಿಜು
*ಎಂಎಸ್ಎಂಇ – ಜಿತನ್ ರಾಮ್ ಮಾಂಝಿ
*ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ – ಸರ್ಬಾನಂದ ಸೋನೊವಾಲ್
*ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ – ಚಿರಾಗ್ ಪಾಸ್ವಾನ್
*ಈಶಾನ್ಯ ವಲಯದ ಅಭಿವೃದ್ಧಿ ಸಚಿವಾಲಯ, ಟೆಲಿಕಾಂ – ಜ್ಯೋತಿರಾದಿತ್ಯ ಸಿಂಧಿಯಾ