ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 94,052 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 1,51,367 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 6148 ಸೋಂಕಿತರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ದೇಶದಲ್ಲಿ ಇದುವರೆಗೆ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ.
ಆರೋಗ್ಯ ಮಂತ್ರಾಲಯ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ 11,67,952 ಸಕ್ರಿಯ ಪ್ರಕರಣಗಳು ಇವೆ.
ಒಟ್ಟು ಪ್ರಕರಣ 2,91,83,121
ಗುಣಮುಖರಾದವರು 2,76,55,493
ಮೃತಪಟ್ಟವರ ಸಂಖ್ಯೆ: 3,59,676
ಲಸಿಕೆ ಪಡೆದವರ ಸಂಖ್ಯೆ 23,90,58,360