ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಪ್ರತಿಮಾ ಕೊಲೆ ಘಟನೆಗೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ಮಾಹಿತಿಯೊಂದನ್ನು ಲಭ್ಯವಾಗಿದ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಗಣಿ-ಭೂ ವಿಜ್ಞಾನಿ ಅಧಿಕಾರಿ ಪ್ರತಿಮೆ ಹತ್ಯೆ ಸಂಬಂಧ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸದಿ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಿರುವ ಅನುಮಾನ ಇದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಪ್ರತಿಮಾ ಅವರು ಅಕ್ರಮ ಗಣಿಗಾರಿಕೆ ಸಂಬಂಧ ವರದಿ ನೀಡಿದ್ದರು. ಸರ್ವೆ ನಂಬರ್ 177, 179 ಭಾಗದಲ್ಲಿ ದೂರು ಬಂದಿತ್ತು.
ಬೆಂಗಳೂರು ನಗರ ಜಿಲ್ಲೆ ಹುಣಸಮಾರನಹಳ್ಳಿ ಗ್ರಾಮದಲ್ಲಿ ಲೈಸೆನ್ಸ್ ಪಡೆಯದೇ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು. ಹೀಗಾಗಿ ದೂರಿನ್ವಯ ಸ್ಥಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಬಳಿಕ ಕಲ್ಲು ಕ್ವಾರಿಯನ್ನು ಸ್ಥಗಿತಗೊಳಿಸಿದ್ದ ಡಿಡಿ ಪ್ರತಿಮಾ ಕೊಲೆ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಡಿಡಿ ಪ್ರತಿಮಾ ಕೊಲೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಪ್ರತಿಮಾ ಕೊಲೆ ವಿಚಾರ ಈಗಷ್ಟೇ ತಿಳಿದುಬಂದಿದೆ. ಪ್ರತಿಮಾ ಕೊಲೆ ವಿಚಾರವನ್ನು ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.