ಬೆಂಗಳೂರು: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರನ್ನು ಜೆಡಿಎಸ್ ನಿಂದ ಉಚ್ಛಾಟಿಸಿ ಆದೇಶ ಹೊರಡಿಸಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರನ್ನು ಜೆಡಿಎಸ್ ನಿಂದ ಈ ಕೂಡಲೇ ಉಚ್ಛಾಟನೆ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಶಿವರಾಮೇಗೌಡರು ಮಹಿಳಾ ಕಾರ್ಯಕರ್ತೆ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಲೋಕಸಭಾ ಉಪಚುನಾವಣೆಯಲ್ಲಿ 30 ಕೋಟಿ ಹಣ ಖರ್ಚು ಮಾಡಿದ್ದಾಗಿ ಹಾಗೂ ಮಾಜಿ ಸಂಸದ ದಿ.ಮಾದೇಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಇದೀಗ ತಮ್ಮದೇ ಪಕ್ಷದ ಮಾಜಿ ಸಂಸದರ ವಿರುದ್ಧ ಜೆಡಿಎಸ್ ಕ್ರಮಕೈಗೊಂಡಿದೆ.