ಅತಿ ವೇಗದ ಇಂಟರ್ನೆಟ್ ಸಂಪರ್ಕ ನೀಡುವ 5ಜಿ ಸೇವೆ ಭಾರತದಲ್ಲಿ ಯಾವಾಗ ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಳಕೆದಾರರಿದ್ದು, ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಅಕ್ಟೋಬರ್ 1ರಂದು ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಸೋಮವಾರದಂದು 5ಜಿ ಸ್ಪೆಕ್ಟ್ರಮ್ ಹರಾಜು ಒಂದು ಹಂತಕ್ಕೆ ಪೂರ್ಣಗೊಂಡಿದ್ದು, ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರತಿ ಏರ್ಟೆಲ್, ವೊಡಾಫೋನ್ ಐಡಿಯಾ ಹಾಗೂ ಅದಾನಿ ಡೇಟಾ ನೆಟ್ವರ್ಕ್ ಪಾಲ್ಗೊಂಡಿದ್ದವು. 1.50 ಲಕ್ಷ ಕೋಟಿ ರೂಪಾಯಿಗಳಿಗೆ 5ಜಿ ಸ್ಪೆಕ್ಟ್ರಮ್ ಹರಾಜಾಗಿದೆ ಎಂದು ಹೇಳಲಾಗಿದೆ.
ಪ್ರಸ್ತುತ ದೇಶದಲ್ಲಿ 4ಜಿ ಸೇವೆ ಲಭ್ಯವಾಗುತ್ತಿದ್ದು, ಆದರೆ ವೇಗದ ಕುರಿತು ಬಳಕೆದಾರರಿಂದ ಅಸಮಾಧಾನ ವ್ಯಕ್ತವಾಗುತ್ತಲೆ ಇತ್ತು. ಅಲ್ಲದೆ ಕಾಲ್ ಡ್ರಾಪ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಳಕೆದಾರರು ಎದುರಿಸಿದ್ದು, 5g ಸೇವೆ ಆರಂಭವಾದರೆ ಇದಕ್ಕೆ ತೆರೆ ಬೀಳಲಿದೆ ಎಂದು ಹೇಳಲಾಗಿದೆ.