ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಎರಡು ಪಟ್ಟಿ ಬಿಡುಗಡೆ ಮಾಡಿದ್ದು, ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಆಡಳಿತರೂಢ ಬಿಜೆಪಿ ಈವರೆಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡದಿರುವ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಮೂಡಿತ್ತು.
ಇದೀಗ ಬಿಜೆಪಿ ಹೈಕಮಾಂಡ್ 189 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಈ ಬಗ್ಗೆ 52 ಹೊಸ ಮುಖಗಳಿಗೆ ಅವಕಾಶ ನೀಡಿದೆ. ಅಲ್ಲದೆ 32 ಓಬಿಸಿ ಅಭ್ಯರ್ಥಿಗಳು ಹಾಗೂ 16 ಎಸ್ ಟಿ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳ ಪೈಕಿ 9 ಮಂದಿ ವೈದ್ಯರು, ಹಾಗೂ ಓರ್ವ ನಿವೃತ್ತ ಐಎಎಸ್ ಅಧಿಕಾರಿಗೆ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. 8 ಮಂದಿ ಸಾಮಾಜಿಕ ಕಾರ್ಯಕರ್ತರನ್ನೂ ಚುನಾವಣೆ ಕಣಕ್ಕೆ ಇಳಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲಿನಂತೆ ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಅಭ್ಯರ್ಥಿಯಾಗಿದ್ದಾರೆ. ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ, ರಾಯಭಾಗದಲ್ಲಿ ದುರ್ಯೋಧನ ಐಹೊಳೆ ಅವಕಾಶ ಪಡೆದುಕೊಂಡಿದ್ದಾರೆ.
ಕುಡಚಿಯಲ್ಲಿ ಪಿ. ರಾಜೀವ್, ಚಿಕ್ಕೋಡಿಯಲ್ಲಿ ರಮೇಶ್ ಕತ್ತಿ, ಕಾಗವಾಡ ಶ್ರೀಮಂತ ಪಾಟೀಲ್, ಹುಕ್ಕೇರಿ ನಿಖಿಲ್ ಕತ್ತಿ, ಗೋಕಾಕ್ ರಮೇಶ್ ಜಾರಕಿಹೊಳಿ, ಅರಬಾವಿ ಬಾಲಚಂದ್ರ ಜಾರಕಿಹೊಳಿ ಅಭ್ಯರ್ಥಿಯಾಗಿದ್ದಾರೆ.
ಬೆಳಗಾವಿ ಉತ್ತರದಿಂದ ರವಿ ಪಾಟೀಲ್, ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್, ಬೈಲಹೊಂಗಲ ಜಗದೀಶ್ ಮೆಟಗುಡ್ಡ, ಬೀಳಗಿ ಮುರುಗೇಶ್ ನಿರಾಣಿ, ಬಾಗಲಕೋಟೆ ವೀರಣ್ಣ ಚರಂತಿಮಠ, ಮುಧೋಳ ಗೋವಿಂದ ಕಾರಜೋಳ ಅಭ್ಯರ್ಥಿಯಾಗಿದ್ದಾರೆ.
ತೇರದಾಳದಲ್ಲಿ ಸಿದ್ದು ಸವದಿ, ವಿಜಯಪುರ ಬಸನಗೌಡ ಪಾಟೀಲ್ ಯತ್ನಾಳ್, ಅಫ್ಜಲ್ಪುರ ಮಾಲೀಕಯ್ಯ ಗುತ್ತೇದಾರ್, ಕಲಬುರಗಿ ಗ್ರಾಮಾಂತರ ಬಸವರಾಜ, ಕಲಬುರಗಿ ದಕ್ಷಿಣ ದತ್ತಾತ್ರೇಯ ಪಾಟೀಲ್, ಸುರಪುರ ರಾಜುಗೌಡ, ಮುದ್ದೇಬಿಹಾಳ ಎ.ಎಸ್. ಪಾಟೀಲ್ ಅಭ್ಯರ್ಥಿಯಾಗಿದ್ದಾರೆ.
ಸೌದತ್ತಿ ಶ್ರೀಮತಿ ರತ್ನ ಮಹಾಮನಿ, ಚಿತ್ತಾಪುರ ಮಣಿಕಂಠ, ಶಿರಹಟ್ಟಿ ಚಂದ್ರು ಲಮಾಣಿ, ಶಿರಸಿ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರೇಕೆರೂರು ಬಿ.ಸಿ. ಪಾಟೀಲ್, ಕಲಬುರ್ಗಿ ಉತ್ತರ ಚಂದ್ರಕಾಂತ್ ಪಾಟೀಲ್, ಅಳಂದ ಸುಭಾಷ್ ಗುತ್ತೇದಾರ್, ಹೂವಿನ ಹಡಗಲಿ ಕೃಷ್ಣ ನಾಯಕ್ ಅಭ್ಯರ್ಥಿಯಾಗಿದ್ದಾರೆ.
ಬಳ್ಳಾರಿ ಗ್ರಾಮೀಣ ಶ್ರೀರಾಮುಲು, ವಿಜಯನಗರ ಸಿದ್ದಾರ್ಥ್ ಸಿಂಗ್, ಬಳ್ಳಾರಿ ನಗರ ಸೋಮಶೇಖರ್ ರೆಡ್ಡಿ, ಶಿಕಾರಿಪುರ ವಿಜಯೇಂದ್ರ, ಹೊನ್ನಾಳ್ಳಿ ರೇಣುಕಾಚಾರ್ಯ, ತೀರ್ಥಹಳ್ಳಿ ಅರಗ ಜ್ಞಾನೇಂದ್ರ ಕಣಕ್ಕಿಳಿಯಲಿದ್ದಾರೆ.
ಉಡುಪಿ ಯಶ್ ಪಾಲ್ ಸುವರ್ಣ, ಚಿಕ್ಕಮಗಳೂರು ಸಿ.ಟಿ. ರವಿ, ಔರಾದ್ ಪ್ರಭು ಚೌಹಾಣ್, ಬಂಗಾರಪೇಟೆ ನಾರಾಯಣಸ್ವಾಮಿ, ಕೋಲಾರ ವರ್ತೂರು ಪ್ರಕಾಶ್, ಚಿಕ್ಕಬಳ್ಳಾಪುರ ಡಾ. ಕೆ. ಸುಧಾಕರ್ ಅಭ್ಯರ್ಥಿಯಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ಜೆ.ಸಿ. ಮಾಧುಸ್ವಾಮಿ, ತಿಪಟೂರು ಬಿ.ಸಿ. ನಾಗೇಶ್, ಕೆ ಆರ್ ಪುರಂ ಬೈರತಿ ಬಸವರಾಜ್, ಆರ್ ಆರ್ ನಗರ ಮುನಿರತ್ನ, ಯಶವಂತಪುರ ಎಸ್ ಟಿ ಸೋಮಶೇಖರ್, ಮಹಾಲಕ್ಷ್ಮಿ ಲೇಔಟ್ ಗೋಪಾಲಯ್ಯ, ರಾಜಾಜಿನಗರ ಸುರೇಶ್ ಕುಮಾರ್, ಚಾಮರಾಜಪೇಟೆ ಭಾಸ್ಕರ್ ರಾವ್ ಕಣಕ್ಕಿಳಿಯಲಿದ್ದಾರೆ.
ಸಿಂಧನೂರು ಕೆ. ಕರಿಯಪ್ಪ, ಮಸ್ಕಿ ಪ್ರತಾಪಗೌಡ ಪಾಟೀಲ್, ಆರ್ ಅಶೋಕ್ ಅವರಿಗೆ 2 ಕ್ಷೇತ್ರ ನೀಡಲಾಗಿದ್ದು ಪದ್ಮನಾಭನಗರ ಹಾಗೂ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.
ಬಸವನಗುಡಿ ರವಿ ಸುಬ್ರಮಣ್ಯ, ಆನೇಕಲ್ ಹುಲ್ಲಳ್ಳಿ ಶ್ರೀನಿವಾಸ್, ಹೊಸಕೋಟೆ ಎಂಟಿಬಿ ನಾಗರಾಜ್, ರಾಮನಗರ ಗೌತಮ್ ಗೌಡ, ಚನ್ನಪಟ್ಟಣ ಸಿ ಪಿ ಯೋಗೇಶ್ವರ್, ಕೆ ಆರ್ ಪೇಟೆ ಕೆ.ಸಿ. ನಾರಾಯಣಗೌಡ, ಹಾಸನ ಪ್ರೀತಂ ಗೌಡ ಅಭ್ಯರ್ಥಿಯಾಗಿದ್ದಾರೆ.
ತುಮಕೂರು ಜ್ಯೋತಿ ಗಣೇಶ್, ವರುಣಾ ವಿ. ಸೋಮಣ್ಣ, ಮಧುಗಿರಿ ನಾಗರಾಜ್, ಯಲಹಂಕ ಎಸ್ ಆರ್ ವಿಶ್ವನಾಥ್, ಬೆಳ್ತಂಗಡಿ ಹರೀಶ್ ಪೂಂಜಾ, ಪುತ್ತೂರು ಆಶಾ ತಿಮ್ಮಪ್ಪ, ಮಡಿಕೇರಿ ಅಪ್ಪಚ್ಚು ರಂಜನ್, ವಿರಾಜಪೇಟೆ ಕೆ ಜಿ ಬೋಪಯ್ಯ, ನಂಜನಗೂಡು ಡಾ. ಹರ್ಷವರ್ಧನ್, ಚಾಮರಾಜ ಎಲ್ ನಾಗೇಂದ್ರ, ಹನೂರು ಪ್ರೀತನ್ ನಾಗಪ್ಪ, ಚಾಮರಾಜನಗರ ವಿ. ಸೋಮಣ್ಣ ಅಭ್ಯರ್ಥಿಯಾಗಿದ್ದಾರೆ.
ರಾಜರಾಜೇಶ್ವರಿ ನಗರ ಮುನಿರತ್ನ ನಾಯ್ಡು, ಮಲ್ಲೇಶ್ವರಂ ಡಾ. ಅಶ್ವಥ್ ನಾರಾಯಣ, ಗಾಂಧಿನಗರ ಸಪ್ತಗಿರಿಗೌಡ, ಮುದ್ದೇಬಿಹಾಳ ಎ.ಎಸ್. ಪಾಟೀಲ ನಡಹಳ್ಳಿ ಅಭ್ಯರ್ಥಿಯಾಗಿದ್ದಾರೆ.
ಸಾಗರ ಹರತಾಳು – ಹಾಲಪ್ಪ, ಭದ್ರಾವತಿ – ಮಂಗೋಟೆ ಮುರುಗೇಶ್, ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯ್ಕ್, ಸೊರಬ – ಕುಮಾರ್ ಬಂಗಾರಪ್ಪ.