ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಇದೀಗ ಹೊಸದಂದು ವಿವಾದ ಸೃಷ್ಟಿಗೆ ಸ್ವಾಮೀಜಿಯೊಬ್ಬರು ಮುಂದಾಗಿದ್ದಾರೆ. ಆಜಾನ್ ಮಾದರಿಯಲ್ಲಿಯೇ ರಾಜ್ಯದಲ್ಲಿ ರಾಮಜಪ ಮಾಡುವುದಾಗಿ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಘೋಷಿಸಿದ್ದಾರೆ.
ಹಿಜಾಬ್ ಹಾಗೂ ಕೇಸರಿ ಸಂಘರ್ಷದ ನಡುವೆ ರಾಮಜಪದ ವಿವಾದ ಆರಂಭವಾಗಿದ್ದು, ಮುಸ್ಲಿಂರ ಆಜಾನ್ ಮಾದರಿಯಲ್ಲೇ ರಾಮಜಪ ಮೊಳಗಿಸುವುದಾಗಿ ಋಷಿಕುಮಾರ ಸ್ವಾಮಿಜಿ ತಿಳಿಸಿದ್ದಾರೆ.
ಧ್ವನಿವರ್ಧಕ ಅಳವಡಿಸಿ ಆಜಾನ್ ರೀತಿಯಲ್ಲಿಯೇ ಚುಂಚನಘಟ್ಟ ಆಂಜನೇಯ ದೇವಾಲಯದಲ್ಲಿ ರಾಮಜಪ ಮಾಡಲು ಸ್ವಾಮೀಜಿ ಮುಂದಾಗಿದ್ದಾರೆ. ಹಿಜಾಬ್ ವಿವಾದ ತಣ್ಣಗಾಗುವ ಮೊದಲೇ ಮತ್ತೊಂದು ರೀತಿಯ ಧರ್ಮ ಸಂಘರ್ಷಕ್ಕೆ ನಾಂದಿ ಹಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ.