ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಮತ್ತೆ ಜೀವ ಪಡೆದುಕೊಂಡಿದ್ದು, ಸ್ಫೋಟಕ ಮಾಹಿತಿ ಬಯಲಾಗಿದೆ. ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಡ್ರಗ್ಸ್ ತೆಗೆದುಕೊಂಡಿರುವುದು ದೃಢವಾಗಿದೆ.
ಡ್ರಗ್ಸ್ ಕೇಸ್ ನಲ್ಲಿ ಆರೋಪಿಗಳಾಗಿರುವ ರಾಗಿಣಿ, ಸಂಜನಾ ಹಾಗೂ ವಿರೇನ್ ಖನ್ನಾ ಅವರ ತಲೆ ಕೂದಲಿನ ಎಫ್.ಎಸ್.ಎಲ್. ಪರೀಕ್ಷೆ ವರದಿ ಇದೀಗ ಸಿಸಿಬಿ ಕೈಸೇರಿದ್ದು, ಮೂವರು ಡ್ರಗ್ಸ್ ತೆಗೆದುಕೊಂಡಿದ್ದರು ಎಂಬುದು ಖಚಿತವಾಗಿದೆ.
ಇನ್ನು ರಾಗಿಣಿ ಹಾಗೂ ಸಂಜನಾ ಸ್ನೇಹಿತರಾದ ರಾಹುಲ್ ತೋನ್ಸೆ, ರವಿಶಂಕರ್, ಲೂಮ್ ಪೆಪ್ಪರ್ ಕೂಡ ಡ್ರಗ್ಸ್ ಸೇವಿಸಿರುವುದು ವರದಿಯಲ್ಲಿ ದೃಢವಾಗಿದೆ.
ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ರಾಗಿಣಿ, ಸಂಜನಾ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಮತ್ತೆ ಸಂಕಷ್ಟ ಎದುರಾಗಿದೆ.