ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗ್ತಿದೆ. ಒಂದು ವಾರದ ಹಿಂದೆ ಪ್ರಕರಣಗಳಲ್ಲಿ ದಿಡೀರ್ ಹೆಚ್ಚಳ ಕಂಡು ಬಂದಿದ್ದು, ಒಮಿಕ್ರಾನ್ ರೂಪಾಂತರ ಭಾರತಕ್ಕೆ ಕಾಲಿಟ್ಟ ಮೇಲೆ ಈ ಬದಲಾವಣೆಯಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಕಳೆದ 24 ಗಂಟೆಯಲ್ಲಿ , 33,750 ಪ್ರಕರಣಗಳು ದೃಢವಾಗಿವೆ. ಇದರ ಮೂಲಕ ಭಾರತದಲ್ಲಿ 1,45,582 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಸೋಮವಾರ ಬೆಳಗ್ಗೆ 8 ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕೇವಲ ಇಪ್ಪತ್ನಾಲ್ಕು ಗಂಟೆಯಲ್ಲಿ 30ಸಾವಿರಕ್ಕು ಹೆಚ್ಚು ಪ್ರಕರಣಗಳು ವರದಿಯಾಗಿರೋದನ್ನ ದೃಢಪಡಿಸಿದೆ. ಜೊತೆಗೆ ಕೊರೋನಾದಿಂದ 123 ಮಂದಿ ಬಲಿಯಾಗಿದ್ದಾರೆಂದು ತಿಳಿಸಿದೆ. ಇತ್ತ ಕಳೆದ ಆರು ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಮೂವತ್ತು ಸಾವಿರವನ್ನು ದಾಟುತ್ತಿರುವುದು ಮೂರನೇ ಅಲೆ ಶುರುವಿನ ಘಟ್ಟ ಇದಾಗಿರಬಹುದ ಎಂಬ ಆತಂಕ ಶುರುವಾಗಿದೆ.
ಪ್ರಸ್ತುತ ಚೇತರಿಕೆಯಾದವರು: 10,846
ಸಕ್ರಿಯ ಪ್ರಕರಣಗಳು: 1,45,582
ಒಟ್ಟು ಚೇತರಿಕೆ: 3,42,95,407
ಸಾವಿನ ಸಂಖ್ಯೆ: 4,81,893
ಒಟ್ಟು ವ್ಯಾಕ್ಸಿನೇಷನ್: 1,45,68,89,306