ಈ ಬಾರಿಯ ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಬಿಜೆಪಿ ನೇತೃತ್ವದ ‘ಎನ್ ಡಿ ಎ’ ಹಾಗೂ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟದ ನಡುವೆ ಭಾರಿ ಹಣಾಹಣಿ ನಡೆಯುತ್ತಿದೆ.
ಕಳೆದ ಬಾರಿ ಸ್ಪಷ್ಟ ಬಹುಮತದೊಂದಿಗೆ ಏಕಾಂಗಿಯಾಗಿ ಸರ್ಕಾರ ರಚಿಸುವಷ್ಟು ಬಹುಮತ ಪಡೆದಿದ್ದ ಬಿಜೆಪಿ, ಈ ಬಾರಿ 230 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
ಸರ್ಕಾರ ರಚನೆಗೆ 272 ಮ್ಯಾಜಿಕ್ ನಂಬರ್ ಆಗಿದ್ದು ಆದರೆ ಈ ಬಾರಿ ಸ್ವತಃ ಬಲದಲ್ಲಿ ಬಿಜೆಪಿ ಅಧಿಕಾರ ಗಳಿಸುವುದು ಅನುಮಾನವಾಗಿದೆ. ಆದರೆ ಇದರ ಮಧ್ಯೆ ಎನ್ ಡಿ ಎ ಮೈತ್ರಿಕೂಟದ ಅಂಗವಾಗಿರುವ ಬಿಜೆಪಿ ಅಂಗಪಕ್ಷಗಳ ನಡೆಯೂ ಬಹು ಮುಖ್ಯವಾಗಿದೆ.
ಅದರಲ್ಲೂ ‘ಜಂಪಿಂಗ್ ಮ್ಯಾನ್’ ಎಂದೇ ಹೆಸರಾಗಿರುವ ಬಿಹಾರ ಮುಖ್ಯಮಂತ್ರಿ ಜೆಡಿಎಸ್ ನಾಯಕ ನಿತೀಶ್ ಕುಮಾರ್ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷಗಳ ಮುಂದಿನ ನಿಲುವು ಏನು ಎಂಬುದು ಕುತೂಹಲಕರವಾಗಿದೆ.
ಇದರ ಮಧ್ಯೆ ‘ಇಂಡಿಯಾ’ ಒಕ್ಕೂಟದ ಪ್ರಮುಖ ಭಾಗವಾಗಿರುವ ಕಾಂಗ್ರೆಸ್, ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಟಿ ಡಿ ಪಿ ನಾಯಕ ಚಂದ್ರಬಾಬು ನಾಯ್ಡು ಜೊತೆ ಈಗಾಗಲೇ ಮಾತುಕತೆ ಆರಂಭಿಸಿದ್ದೇವೆ ಎಂದಿದೆ.