ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿ ಸಿಕ್ಕಿದ್ದು, ತುಂಗಾ ಕಾಲುವೆಗೆ ಕಾರು ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಶಾಸಕ ರೇಣುಕಾಚಾರ್ಯ ಸಹೋದರ ರಮೇಶ್ ಅವರ ಮಗ ಚಂದ್ರಶೇಖರ್ ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದು, ಕುಟುಂಬದವರನ್ನು ಇನ್ನಿಲ್ಲದ ಆತಂಕಕ್ಕೀಡು ಮಾಡಿದೆ. ಚಂದ್ರಶೇಖರ್ ಪತ್ತೆಗಾಗಿ ದಾವಣಗೆರೆ ಎಸ್ ಪಿ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಿ ಶೋಧ ನಡೆಸಲಾಗುತ್ತಿದೆ.
ಈ ನಡುವೆ ಚಂದ್ರಶೇಖರ್ ಚಲಿಸುತ್ತಿದ್ದ ಕಾರು ತುಂಗಾ ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ಕಡದಕಟ್ಟೆ ಗ್ರಾಮದ ತುಂಗಾ ಮುಖ್ಯ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರೊಂದು ಪತ್ತೆಯಾಗಿದೆ. ಸ್ಥಳಕ್ಕೆ ಶಾಸಕ ರೇಣುಕಾಚಾರ್ಯ ಹಾಗೂ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.