ನವದೆಹಲಿ: ಮತದಾರರ ಗುರುತಿನ ಚೀಟಿ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದು, ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಈ ಮೂಲಕ ಆಸಕ್ತಿ ಇರುವ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಜತೆಗೆ ಲಿಂಕ್ ಮಾಡುವ ಅವಕಾಶ ಕಲ್ಪಿಸಲಾಗಿದ್ದು, 1951ರಲ್ಲಿ ಜಾರಿಯಾಗಿರುವ ಜನಪ್ರತಿನಿಧಿ ಕಾಯ್ದೆಗಳ ವಿವಿಧ ಸೆಕ್ಷನ್ ಗಳಿಗೂ ತಿದ್ದುಪಡಿ ತರುವ ಅಂಶವನ್ನು ಮಸೂದೆಯಲ್ಲಿ ಪ್ರಸಾಪಿಸಲಾಗಿದೆ.
ವಿವಿಧ ಸ್ಥಳಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವುದನ್ನು ತಡೆಗಟ್ಟಲು ವೋಟರ್ ಐಡಿಗೆ ಆಧಾರ್ ಲಿಂಕ್ ಜಾರಿಗೆ ತರಲಾಗಿದೆ. ಆದರೆ ಒಂದು ವೇಳೆ ಆಧಾರ್ ಸಂಖ್ಯೆ ನೀಡದಿದ್ದರೆ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ. ಅಂತವರಿಗೆ ಬೇರೆ ದಾಖಲೆ ನೀಡಲು ಅವಕಾಶವಿದೆ ಎನ್ನಲಾಗಿದೆ.