
ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ವಿರಾಟ್ ಕೊಹ್ಲಿ 51ನೇ ಶತಕ ಸಿಡಿಸಿದ್ದಾರೆ.
ಅವರು ಅಜೇಯ ಶತಕ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 241 ರನ್ ಗೆ ಆಲೌಟ್ ಆಗಿದ್ದು, ಭಾರತಕ್ಕೆ 242 ರನ್ ಗೆಲುವಿನ ಗುರಿ ನೀಡಿತ್ತು.
ಪಾಕಿಸ್ತಾನ ಪರವಾಗಿ ಇಮಾಮ್ ಉಲ್ ಹಕ್ 10, ಬಾಬರ್ ಆಜಮ್ 23, ಸೌದ್ ಶಕೀಲ್ 62, ಮಹಮ್ಮದ್ ರಿಜ್ವಾನ್ 46, ಸಲ್ಮಾನ್ ಆಘಾ 19, ತಯಾಬ್ ತಾಹಿರ್ 4, ಕುಶ್ ದಿಲ್ ಶಹಾ 38, ಶಾಹಿನ್ ಆಫ್ರಿದಿ 0, ನಾಸಿಂ ಶಹಾ 14, ಹ್ಯಾರಿಸ್ ರವೂಫ್ 8 ರನ್ ಗಳಿಸಿದ್ದಾರೆ. 49.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 241 ರನ್ ಗಳಿಸಿದೆ.
ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ 2, ಕುಲದೀಪ್ ಯಾದವ್ 3, ಹರ್ಷಿತ್ ರಾಣಾ 1, ಅಕ್ಷರ್ ಪಟೇಲ್ 1, ರವೀಂದ್ರ ಜಡೇಜ 1 ವಿಕೆಟ್ ಪಡೆದರು.
242 ಗೆಲುವಿನ ಗುರಿ ಪಡೆದ ಭಾರತ 42.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 244 ರನ್ ಗಳಿಸಿದೆ.
ರೋಹಿತ್ ಶರ್ಮಾ 20, ಶುಭಮನ್ ಗಿಲ್ 46, ವಿರಾಟ್ ಕೊಹ್ಲಿ ಅಜೇಯ 100, ಶ್ರೇಯಸ್ ಅಯ್ಯರ್ 56, ಹಾರ್ದಿಕ್ ಪಾಂಡ್ಯ 8, ಅಕ್ಷರ್ ಪಟೇಲ್ ಅಜೇಯ 3 ರನ್ ಗಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಜಯಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ ಪಾಕ್ ತಂಡ ಮಣಿಸಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ.
ಪಾಕ್ ಪರ ಶಾಹೀನ್ ಅಫ್ರಿದಿ 2, ಅಬ್ರಾರ್ ಅಹಮ್ಮದ್ 1, ಕೆ. ಶಹಾ 1 ವಿಕೆಟ್ ಪಡೆದರು.
ಪಂದ್ಯದಲ್ಲಿ ವಿರಾಟ್ ಕೊಹ್ಲಿ 14000 ಏಕದಿನ ರನ್ ಪೂರೈಸಿ, ಸಚಿನ್ ತೆಂಡೂಲ್ಕರ್, ಕುಮಾರ್ ಸಂಗಕ್ಕಾರ ಅವರ ಪಟ್ಟಿಯಲ್ಲಿ ಸ್ಥಾನ ಪಡೆದರು. ಕೊಹ್ಲಿ ಕೇವಲ 287 ಇನ್ನಿಂಗ್ಸ್ ಗಳಲ್ಲಿ 14,000 ರನ್‌ಗಳ ಗಡಿಯನ್ನು ತಲುಪಿದರು, ಈ ಹಿಂದೆ 350 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಸಚಿನ್ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಹೊಂದಿದ್ದಾರೆ(18,426), 14,234 ರನ್ ಗಳಿಸಿರುವ ಸಂಗಕ್ಕಾರ 2ನೇ ಸ್ಥಾನದಲ್ಲಿದ್ದಾರೆ.
ಇದೇ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೊಹ್ಲಿ ODIಗಳಲ್ಲಿ ತಂಡಕ್ಕಾಗಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ಹಿಂದಿಕ್ಕಿದರು. ಅಜರುದ್ದೀನ್(156) ಅವರೊಂದಿಗೆ ಸಮಬಲ ಸಾಧಿಸಿದ್ದ ಅವರು, ಪಂದ್ಯದಲ್ಲಿ ಎರಡು ಕ್ಯಾಚ್‌ಗಳನ್ನು ತೆಗೆದುಕೊಂಡು ಮಾಜಿ ನಾಯಕನನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 241/10(49.4)
ಭಾರತ 244/4(42.3)
Big Game 🏟️
Big Player 😎
Big Knock 💥King for a reason 👑
Updates ▶️ https://t.co/llR6bWyvZN#TeamIndia | #PAKvIND | #ChampionsTrophy | @imVkohli pic.twitter.com/oMOXidEGag
— BCCI (@BCCI) February 23, 2025
CT 2025. India Won by 6 Wicket(s) https://t.co/llR6bWz3Pl #PAKvIND #ChampionsTrophy
— BCCI (@BCCI) February 23, 2025