ದಕ್ಷಿಣ ಕನ್ನಡ: ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ ಪ್ರಕರಣಕ್ಕೆ ಬಿಗ್ ಟ್ವಿಟ್ಸ್ ಸಿಕ್ಕಿದ್ದು, ರೋಗಿಗಳಂತೆ ನಟಿಸಲು ಮಹಿಳೆಯರನ್ನು ಕರೆದೊಯ್ಯುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ಫ್ರೀ ಬೆಡ್ ಗಳಿಗೆ ಹಣಕೊಟ್ಟು ನಕಲಿ ರೋಗಿಗಳನ್ನು ಭರ್ತಿ ಮಾಡಲಾಗುತ್ತಿತ್ತು. ರೋಗಿಗಳಂತೆ ನಟಿಸಲು ಮಹಿಳೆಯರನ್ನು ಕಣಜೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸ್ ವಿಚಾರಣೆ ವೇಳೆ ಆಸ್ಪತ್ರೆ ಮ್ಯಾನೇಜರ್ ನವಾಜ್ ಬಾಯ್ಬಿಟ್ಟಿದ್ದಾನೆ.
ಎನ್ಎಂಸಿ ಪರಿಶೀಲನೆಗೆ ಬಂದಾಗ ಇವರು ರೋಗಿಗಳೆಂದು ತೋರಿಸಲು ಒಬ್ಬರಿಗೆ ಇಂತಿಷ್ಟು ಎಂದು ಹಣ ಕೊಟ್ಟು ಮಹಿಳೆಯರನ್ನು ಕರೆತಂದಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಮುಲ್ಕಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.