ಮಹಾರಾಷ್ಟ್ರ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಮಧ್ಯೆ ಕೊರೊನಾ ಕೂಡಾ ರಾಜ್ಯಪಾಲರು ಹಾಗೂ ಗಣ್ಯರನ್ನು ಕಾಡತೊಡಗಿದೆ. ಮಹಾರಾಷ್ಟ್ರ ಬಿಕ್ಕಟ್ಟು ಆರಂಭವಾದ ಸಂದರ್ಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಕೊರೊನಾ ಕಾಣಿಸಿಕೊಂಡಿತ್ತು.
ಬಳಿಕ ಅವರು ಮುಂಬೈನ ಎನ್.ಎಚ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅದಾದ ಮರುದಿನವೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಹೋಂ ಐಸೊಲೇಶನ್ನಲ್ಲಿ ಇದ್ದಾರೆ.
ಇದರ ಮಧ್ಯೆ ರಾಜ್ಯಪಾಲರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದೀಗ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಪ್ರಮುಖರು ಕೊರೊನಾ ಸೋಂಕಿಗೊಳಗಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.