alex Certify BIG BREAKING: ರಾಜ್ಯದಲ್ಲಿ ವರುಣಾರ್ಭಟಕ್ಕೆ 73 ಜನರು ಬಲಿ; 14 ಜಿಲ್ಲೆಗಳಲ್ಲಿ ಭಾರಿ ಪ್ರವಾಹ; 21,727 ಜನರು ಸಂಕಷ್ಟಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಾಜ್ಯದಲ್ಲಿ ವರುಣಾರ್ಭಟಕ್ಕೆ 73 ಜನರು ಬಲಿ; 14 ಜಿಲ್ಲೆಗಳಲ್ಲಿ ಭಾರಿ ಪ್ರವಾಹ; 21,727 ಜನರು ಸಂಕಷ್ಟಕ್ಕೆ

ಬೆಂಗಳೂರು: ರಾಜ್ಯಾದ್ಯಂತ ಎರಡು ತಿಂಗಳಿಂದ ಭಾರಿ ಮಳೆಯಾಗುತ್ತಿದ್ದು, ರಣ ಮಳೆಗೆ 14 ಜಿಲ್ಲೆಗಳಲ್ಲಿ ಪ್ರವಾಹವುಂಟಾಗಿದೆ. 21,727 ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು. ಕಳೆದ ಎರಡು ತಿಂಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಅತಿವೃಷ್ಠಿಯಿಂದಾಗಿ ಈವರೆಗೆ 73 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಸಿಡಿಲು ಬಡಿದು 15 ಜನರು, ಮರ ಬಿದ್ದು ಐವರು, ಮನೆ ಕುಸಿತದಿಂದ 19 ಜನರು, ಪ್ರವಾಹಕ್ಕೆ ಸಿಲುಕಿ 24 ಜನರು, ಭೂ ಕುಸಿತಕ್ಕೆ 9 ಜನರು ಹಾಗೂ ವಿದ್ಯುತ್ ತಗುಲಿ ಓರ್ವ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಿಂದ ಈವರೆಗೆ 8,197 ಜನರನ್ನು ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ 7386 ಜನ ಆಶ್ರಯ ಪಡೆದಿದ್ದಾರೆ. ಮಳೆಯಿಂದಾಗಿ 666 ಮನೆಗಳು ಸಂಪೂರ್ಣ ಹಾನಿ ಆಗಿವೆ. 2949 ಮನೆಗಳು ತೀವ್ರ ಹಾನಿಯಾಗಿದ್ದು, 17,750 ಮನೆಗಳು ಭಾಗಶ: ಹಾನಿಯಾಗಿವೆ. ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳಿಗೆ ತಕ್ಷಣ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ. ಕಾಳಜಿ ಕೇಂದ್ರದಿಂದ ಮನೆಗೆ ಹೋಗುವವರಿಗೆ 10 ಕೆಜಿ ಅಕ್ಕಿ, ತೊಗರಿ ಬೇಳೆ, ಉಪ್ಪು, ಎಣ್ಣೆ ಇರುವ ಕಿಟ್ ವಿತರಿಸಲಾಗುತ್ತಿದೆ ಕೊಡೆ, ಟಾರ್ಚ್ ಕೊಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...