ರಷ್ಯಾ – ಉಕ್ರೇನ್ ಮಧ್ಯೆ ಯುದ್ದ ಆರಂಭವಾಗಿರುವ ಮಧ್ಯೆ ರಷ್ಯಾದ ಐದು ಯುದ್ದ ವಿಮಾನಗಳನ್ನು ತಾನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಸೇನಾ ಪಡೆ ಹೇಳಿಕೊಂಡಿದೆ.
ಅಮೆರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳ ಒಕ್ಕೂಟದ ವಿರೋಧದ ನಡುವೆಯೂ ರಷ್ಯಾ, ಉಕ್ರೇನ್ ಮೇಲೆ ದಾಳಿ ಆರಂಭಿಸಿದ್ದು, ಇದಕ್ಕೆ ಉಕ್ರೇನ್ ಸಹ ಪ್ರತ್ಯುತ್ತರ ನೀಡಲಾರಂಭಿಸಿದೆ.
ಇದರ ಮಧ್ಯೆ ಉಕ್ರೇನ್ – ರಷ್ಯಾ ನಡುವೆ ಯುದ್ದ ಈಗಾಗಲೇ ಆರಂಭವಾಗಿರುವ ಪರಿಣಾಮ ಈಗ ಜಗತ್ತಿನ ಆರ್ಥಿಕ ಕ್ಷೇತ್ರದ ಮೇಲೂ ಬೀಳಲಾರಂಭಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರಿದ್ದು, ಇದು ಭಾರತದ ತೈಲ ಬೆಲೆ ಮೇಲೂ ಪರಿಣಾಮ ಬೀರುವುದ ಖಚಿತವೆನ್ನಲಾಗಿದೆ.