ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರು ಕೋರ್ಟ್ ನ.9ಕ್ಕೆ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದೆ.
ಮಂಗಳೂರಿನ ಮಳಲಿ ಮಸೀದಿ ದೇವಾಲಯ ಮಾದರಿಯಲ್ಲಿರುವ ಹಿನ್ನೆಲೆಯಲ್ಲಿ ವಿವಾದದ ಕಿಡಿ ಆರಂಭವಾಗಿತ್ತು. ವಿಶ್ವ ಹಿಂದೂ ಪರಿಷತ್ ಮಸೀದಿ ಕಾಮಗಾರಿಗೆ ತಡೆಯಾಜ್ಞೆ ತಂದಿತ್ತು. ಅಲ್ಲದೇ ಮಸೀದಿ ಸರ್ವೆಗೆ ಆದೇಶ ನೀಡುವಂತೆ ಮಂಗಳೂರು 3ನೇ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ವಿ ಹೆಚ್ ಪಿ ಅರ್ಜಿ ವಜಾಗೊಳಿಸುವಂತೆ ಮಸೀದಿ ಮಂಡಳಿ ಕೂಡ ಕೋರ್ಟ್ ಮೊರೆ ಹೋಗಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಮಳಲಿ ಮಸೀದಿ ವಿವಾದ ಕುರಿತ ಆದೇಶವನ್ನು ನವೆಂಬರ್ 9ರಂದು ಪ್ರಕಟಿಸುವುದಾಗಿ ತೀರ್ಪು ಕಾಯ್ದಿರಿಸಿದೆ.