ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪಿಸುತ್ತಿದ್ದು, ಇಂದು ಬೆಳಿಗ್ಗೆ ಮತ್ತೆ ಭೂಮಿ ಕಂಪಿಸಿರುವ ಕಾರಣ ಜನತೆ ಆತಂಕಗೊಂಡಿದ್ದಾರೆ.
ಬಿರುಮಳೆಯ ನಡುವೆ ಮಡಿಕೇರಿ ತಾಲೂಕಿ ಸಂಪಾಂಜೆ, ಕರಿಕೆ, ಚೆಂಬು, ಗೂನಡ್ಕ ಭಾಗದಲ್ಲಿ ಇಂದು ಬೆಳಿಗ್ಗೆ 6-24 ರ ಸುಮಾರಿಗೆ ಭೂಮಿ ಕಂಪಿಸಿದೆ.
ಇದರ ಜೊತೆಗೆ ಮಳೆಯೂ ದೊಡ್ಡ ಪ್ರಮಾಣದಲ್ಲಿ ಸುರಿಯುತ್ತಿರುವುದರಿಂದ ಜನತೆ ಆತಂಕದಿಂದಲೇ ದಿನ ಕಳೆಯುವಂತಾಗಿದೆ.