ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ವ ಕ್ಷೇತ್ರವನ್ನು ಮಗನಿಗಾಗಿ ಬಿಟ್ಟುಕೊಟ್ಟಿದ್ದು, ಮುಂಬರುವ ಚುನಾವಣೆಯಲ್ಲಿ ಶಿಕಾರಿಪುರದಿಂದ ಬಿ.ವೈ.ವಿಜೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಬಿ.ಎಸ್.ವೈ ಅಧಿಕೃತವಾಗಿ ಘೋಷಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟು ಕೊಡುತ್ತೇನೆ. ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಡವಿದೆ. ಆದರೆ ಶಿಕಾರಿಪುರ ಕ್ಷೇತ್ರ ಸ್ಥಾನ ತೆರವಾಗುವುದರಿಂದ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆ ನನ್ನ ಆದ್ಯ ಕರ್ತವ್ಯ. ತಂದೆಯ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇನೆ. ತಿಂಗಳ ಹಿಂದೆ ಶಿಕಾರಿಪುರದ ಮುಖಂಡರು ತಂದೆಯವರನ್ನು ಭೇಟಿಯಾಗಿ ನನ್ನ ಸ್ಪರ್ಧೆಗೆ ಒತ್ತಡ ಹಾಕಿದರು. ನನ್ನ ಸ್ಪರ್ಧೆಯಿಂದ ಯಡಿಯೂರಪ್ಪ ನಿವೃತ್ತಿ ಅಲ್ಲ. ನಿವೃತ್ತಿ ಎಂಬುದು ಯಡಿಯೂರಪ್ಪನವರ ಡಿಕ್ಷನರಿಯಲ್ಲೇ ಇಲ್ಲ ಎಂದು ಹೇಳಿದರು.