ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆಯೇ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕ್ಯಾಂಟರ್, ಬಿಎಂಟಿಸಿ ಬಸ್, ಟೆಂಪೊ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದೆ.
ಮೈಸೂರು ರಸ್ತೆ ಬಳಿಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ಬಸ್ ಹಾಗೂ ಟೆಂಪೋ ನಡುವೆ ಆಟೋ ಚಾಲಕ ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಮೊರೆ ಇಟ್ಟಿದ್ದಾನೆ. ಆಟೋ ಚಾಲಕನನ್ನು ಹೊರತೆಗೆಯಲು ಪೊಲೀಸರು ಹಾಗೂ ಸಾರ್ವಜನಿಕರು ಹರಸಾಹಸ ಪಟ್ಟಿದ್ದಾರೆ.
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಡುತ್ತಿದ್ದ ಬಸ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಟೆಂಪೋ ಗೆ ಗುದ್ದಿದ್ದು, ಮಧ್ಯೆ ಸಿಲುಕಿದ್ದ ಆಟೋ ನುಜ್ಜುಗುಜ್ಜಾಗಿ ಆಟೋ ಚಾಲಕ ಬಸ್ ಹಾಗೂ ಟೆಂಪೋ ನಡುವೆ ಸಿಲುಕಿಕೊಂಡಿದ್ದಾನೆ.