ಬೆಂಗಳೂರು: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಮುಖ್ಯಮಂತ್ರಿ ಕಾರ್ಯದರ್ಶಿ ಪೊನ್ನುರಾಜ್ ಸೇರಿದಂತೆ 17 ಐಎಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಡಿಪಿಎ ಆರ್ (ಇ-ಆಡಳಿತ)ಕಾರ್ಯದರ್ಶಿಯಾಗಿ, ತುಷಾರ್ ಗಿರಿನಾಥ್ ಅವರನ್ನು ಬಿಬಿಎಂಪಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಮುಖ್ಯಮಂತ್ರಿ ಕಾರ್ಯದರ್ಶಿ ಪೊನ್ನುರಾಜ್ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಕೆಪಿಸಿಎಲ್ ಎಂಡಿ ಹುದ್ದೆ ಹೆಚ್ಚುವರಿ ಹೊಣೆ
ಟಿ.ಕೆ.ಅನಿಲ್ ಕುಮಾರ್- ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ
ಮನೋಜ್ ಜೈನ್ -ಕಾರ್ಮಿಕ ಇಲಾಖೆ ಕಾರ್ಯದರ್ಶಿ
ಖುಷ್ಬೂ ಜಿ ಚೌದರಿ – ಕರ್ನಾಟಕ ಭವನ ಉಪ ಆಯುಕ್ತರು
ಡಾ. ರಾಜೇಂದ್ರ ಕೆ – ಕೆಪಿಎಸ್ಸಿ ಕಾರ್ಯದರ್ಶಿ
ಎಂ.ಜಿ. ಹಿರೇಮಠ – ಕೆ ಆರ್ ಐ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಒಟ್ಟು 17 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
BIG NEWS: ಪಿಎಸ್ಐ ನೇಮಕಾತಿ ಅಕ್ರಮ; ಪೊಲೀಸರೇ ಭಾಗಿ; DYSP, CPI ಸೇರಿ ಮತ್ತಿಬ್ಬರು ಅಧಿಕಾರಿಗಳನ್ನು ಬಂಧಿಸಿದ CID