ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯಲ್ಲಿ 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ ಎಂದು ದಾಳಿಯಲ್ಲಿ ಸಿಕ್ಕ ಅಕ್ರಮ ಆಸ್ತಿ ಪಾಸ್ತಿ ಬಗ್ಗೆ ಇಲಾಖೆ ಅಧಿಕಾರಿಗಳಿಂದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಐಟಿ ದಾಳಿಯಲ್ಲಿ 750 ಕೋಟಿ ರೂಪಾಯಿ ಆಸ್ತಿ ಪತ್ತೆಯಾಗಿದೆ. ನೀರಾವರಿ ಮತ್ತು ಹೆದ್ದಾರಿ ಯೋಜನೆಗಳಲ್ಲಿ ಅಕ್ರಮವೆಸಗಿದ್ದಾರೆ. ದಾಳಿ ಸಂದರ್ಭದಲ್ಲಿ 4.69 ಕೋಟಿ ರೂಪಾಯಿ ನಗದು ಜಪ್ತಿ ಮಾಡಲಾಗಿದೆ.
8.6 ಕೋಟಿ ಮೌಲ್ಯದ ಚಿನ್ನ, 20 ಲಕ್ಷದ ಬೆಳ್ಳಿ ಜಪ್ತಿ ಮಾಡಲಾಗಿದೆ. 4 ರಾಜ್ಯಗಳಲ್ಲಿ 47 ಕಡೆ ದಾಳಿ ನಡೆಸಲಾಗಿತ್ತು. 40 ಜನರ ಹೆಸರಿನಲ್ಲಿ ಅಕ್ರಮವಾಗಿ ಉಪಗುತ್ತಿಗೆ ಪಡೆಯಲಾಗಿದ್ದು, 750 ಕೋಟಿ ರೂಪಾಯಿ ಅಕ್ರಮ ನಡೆದಿದೆ. 482 ಕೋಟಿ ರೂಪಾಯಿ ಲೆಕ್ಕವಿಲ್ಲದ ಹಣ ಎಂದು ಕಂಪನಿಗಳು ಒಪ್ಪಿಕೊಂಡಿದೆ. 380 ಕೋಟಿ ರೂಪಾಯಿ ಕಾರ್ಮಿಕ ವೆಚ್ಚವನ್ನು ಕಂಪನಿ ತೋರಿಸಿವೆ. ಮೂವರು ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಸಲಾಗಿತ್ತು ಎಂದು ಹೇಳಲಾಗಿದೆ.