ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಬಯಲು ಬೆನ್ನಲ್ಲೇ ಇದೀಗ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅಕ್ರಮ ನಡೆದಿರುವುದು ಬಯಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಪರೀಕ್ಷೆಯಲ್ಲಿಯೂ ಮೋಸ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಪಿಎಸ್ಐ ಪರೀಕ್ಷಾರ್ಥಿಗಳಿಗೆ ಲಾಡ್ಜ್ ನಲ್ಲಿಯೇ ಕುಳಿತು ಬ್ಲೂಟೂತ್ ಮೂಲಕ ಉತ್ತರ ಹೇಳಲಾಗುತ್ತಿರುವ ವಿಡಿಯೋ ಬಯಲಾಗಿದ್ದು, ಆದರೆ ಆ ವಿಡಿಯೋದಲ್ಲಿ ಹೇಳಲಾಗುತ್ತಿರುವ ಉತ್ತರಗಳಿಗೂ, ಪಿಎಸ್ಐ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳಿಗೂ ತಾಳೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ. ಆದರೆ ವಿಡಿಯೋದಲ್ಲಿ ವ್ಯಕ್ತಿ ಹೇಳುತ್ತಿರುವ ಉತ್ತರಗಳು PWD ಇಲಾಖೆ ನೇಮಕಾತಿ ಪರೀಕ್ಷೆಗೆ ಸಂಬಂಧಪಟ್ಟದ್ದು ಎನ್ನಲಾಗಿದೆ.
ಖಾಲಿ ಇದೆಯಂತೆ ರೂಮ್‌ಮೇಟ್ ಹುದ್ದೆ, ಅರ್ಜಿದಾರರಿಗೆ ವಿಚಿತ್ರ ಷರತ್ತು…!
2021 ಡಿಸೆಂಬರ್ 13ರಂದು ನಡೆದಿದ್ದ ಲೋಕೋಪಯೋಗಿ ಇಲಾಖೆ ನೇಮಕಾತಿ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿರುವುದು ಇದೀಗ ಬೆಳಕಿಗೆ ಬಂದಿದ್ದು, ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಲಾಡ್ಜ್ ರೂಂ ನಲ್ಲಿ ಕುಳಿತು ವ್ಯಕ್ತಿಯೋರ್ವ ಪರೀಕ್ಷಾ ಕೇಂದ್ರದಲ್ಲಿನ ಪರಿಕ್ಷಾರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ರವಾನಿಸುತ್ತಿರುವ ದೃಶ್ಯ ಬಹಿರಂಗವಾಗಿದೆ.
ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ನೇಮಕಾತಿಯಲ್ಲಿ ಸಾಲು ಸಾಲು ಅಕ್ರಮಗಳು ನಡೆದಿರುವುದು ಬಹುತೇಕ ಸ್ಪಷ್ಟವಾಗಿದ್ದು, ಕೆದಕಿದಷ್ಟು ಪರೀಕ್ಷಾ ಅಕ್ರಮಗಳು ಬಯಲಾಗುತ್ತಿವೆ.