alex Certify BIG BREAKING: ನೆಹರು ಹುಕ್ಕಾ ಸೇದುತ್ತಿದ್ದದ್ದು ತಪ್ಪೋ…? ನಾನು ಹೇಳಿದ್ದು ತಪ್ಪೋ….?; ಹುಕ್ಕಾ ಬಾರ್ ಬಗ್ಗೆ ಉರಿ ಹೊತ್ತಿಸಿಕೊಂಡಿದ್ದಾರೆ; ವಿವಾದಕ್ಕೆ ತುಪ್ಪ ಸುರಿದ ಸಿ.ಟಿ.ರವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ನೆಹರು ಹುಕ್ಕಾ ಸೇದುತ್ತಿದ್ದದ್ದು ತಪ್ಪೋ…? ನಾನು ಹೇಳಿದ್ದು ತಪ್ಪೋ….?; ಹುಕ್ಕಾ ಬಾರ್ ಬಗ್ಗೆ ಉರಿ ಹೊತ್ತಿಸಿಕೊಂಡಿದ್ದಾರೆ; ವಿವಾದಕ್ಕೆ ತುಪ್ಪ ಸುರಿದ ಸಿ.ಟಿ.ರವಿ

Breaking ಸಿ.ಟಿ ರವಿ ಥರ್ಡ್ ಅಂಪೈರ್ ರಿಸಲ್ಟ್ 'ಔಟ್'..! | Corona Third umpire Result out Minister CT Ravi Tested COVID 19 Positive

ಚಿಕ್ಕಮಗಳೂರು: ಕಾಂಗ್ರೆಸ್ ನವರು ತಮ್ಮ ಕಚೇರಿಗಳಲ್ಲಿ ನೆಹರು ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇದೀಗ ಮತ್ತೆ ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ನೆಹರು ಹುಕ್ಕಾ ಸೇದುತ್ತಿದ್ದದ್ದು ತಪ್ಪೋ? ರವಿ ಹೇಳಿದ್ದು ತಪ್ಪೋ? ನೆಹರು ಹುಕ್ಕಾ ಸೇದುವ ನೂರಾರು ಫೋಟೋಗಳಿವೆ. ಸ್ವತಃ ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ ನೆಹರು, ಇಂದಿರಾ ಬಗ್ಗೆ ಮಾತನಾಡಿರುವುದನ್ನು ಹೊರಗೆ ಬಿಡಲೇ? ಇಬ್ರಾಹಿಂ ಅವರು ಇಂದಿರಾ ಅವರನ್ನು ಏನಂತ ಕರೆದರು? ನಾನು ನೆಹರು, ಇಂದಿರಾ ಬಗ್ಗೆ ಮಾತನಾಡಿದ್ದಕ್ಕೆ ಕಾಂಗ್ರೆಸ್ ನವರು ಉರಿ ಹತ್ತಿಸಿಕೊಂಡಿದ್ದಾರೆ. ನನ್ನ ಮೇಲೆಯೇ ಕಾಂಗ್ರೆಸ್ ನವರಿಗೆ ಇಷ್ಟೊಂದು ದ್ವೇಷ ಇರುವಾಗ ಇನ್ನು ಕಾಂಗ್ರೆಸ್ ನವರಿಗೆ ನೆಹರು ಬಗ್ಗೆ ಇನ್ನೆಷ್ಟು ದ್ವೇಷ ಇರಬೇಡ ಎಂದು ಪ್ರಶ್ನಿಸಿದ್ದಾರೆ.

ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್

ನನಗೆ ಕುಡಿಯೋ ಅಭ್ಯಾಸವಿಲ್ಲ, ಕುಡುಕನ ಪಟ್ಟ ಕಟ್ಟಿದರು. ಆದರೆ ಪ್ರತಿದಿನ ಕುಡಿಯುವವರು ಅವರೇ. ನಾನು ಮುಂಜಾನೆ 5 ಗಂಟೆಗೆ ಎದ್ದು ಯೋಗ ಮಾಡುತ್ತೇನೆ. ದಿನದ 24 ಗಂಟೆ ಪಕ್ಷ, ಸಮಾಜ, ರಾಷ್ಟ್ರದ ಬಗ್ಗೆ ಚಿಂತನೆ ಮಾಡುತ್ತಾ ಸದಾ ಸಕ್ರಿಯನಾಗಿರುತ್ತೇನೆ. ಆದರೆ ಅವರು ಏನೇನು ಮಾಡುತ್ತಾರೆ? ಅವರ ಹಳೆಯ ಕಥೆಗಳೇನು ಎಂಬುದನ್ನು ಹೇಳಲೇ? ಅವರ ಮಟ್ಟಕ್ಕೆ ನಾನು ಇಳಿದಿಲ್ಲ. ನಾನು ಆರ್.ಎಸ್.ಎಸ್ ಸ್ವಯಂ ಸೇವಕ. ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...