ಹೈಟಿ ಅಧ್ಯಕ್ಷ ಜೋವೆನಿಲ್ ಮೊಯಿಸ್ ಅವರನ್ನು ಬಂದೂಕುಧಾರಿಗಳು ಅವರ ನಿವಾಸದಲ್ಲಿಯೇ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಜೋವೆನಿಲ್ ಮೊಯಿಸ್ ಅವರ ಪತ್ನಿ ಮಾರ್ಟಿನೆ ಮೊಯಿಸ್ ಕೂಡಾ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಅಧ್ಯಕ್ಷ ಜೋವೆನಿಲ್ ಮೊಯಿಸ್ ಅವರ ಖಾಸಗಿ ನಿವಾಸದಲ್ಲಿ ನಡೆದಿದೆ ಎನ್ನಲಾಗಿದ್ದು, ಹೈಟಿಯ ಹಂಗಾಮಿ ಅಧ್ಯಕ್ಷರು ಪ್ರಕಟಣೆ ಮೂಲಕ ಜೋವೆನಿಲ್ ಮೊಯಿಸ್ ಅವರ ಹತ್ಯೆಯನ್ನು ಖಚಿತಪಡಿಸಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.