ಚಂಡೀಘಡ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. ಈ ನಡುವೆ ನಾನು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಆಪ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ತಿಳಿಸಿದ್ದಾರೆ.
ಸುದ್ದಿಗೋಷ್ಥಿಯಲ್ಲಿ ಮಾತನಾಡಿದ ಭಗವಂತ್ ಮಾನ್, ನಾನು ಪಂಜಾಬ್ ನ ಸಾಮಾನ್ಯ ವ್ಯಕ್ತಿಯಂತೆ ಜನರ ಸೇವೆ ಮಾಡುತ್ತೇನೆ. ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವುದಿಲ್ಲ. ಹುತಾತ್ಮ ಭಗತ್ ಸಿಂಗ್ ಸ್ವಗ್ರಾಮದಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಘೋಷಿಸಿದ್ದಾರೆ.
BIG BREAKING: ಗೋವಾದಲ್ಲಿ ಸುಗಮವಾಯ್ತು BJP ಸರ್ಕಾರ ರಚನೆ ದಾರಿ
ಭಗತ್ ಸಿಂಗ್ ಹುಟ್ಟೂರಾದ ಖಟ್ಕರ್ ಕಾಲ್ ಗ್ರಾಮದಲ್ಲಿ ತಾವು ಪ್ರಮಾಣವಚನ ಸ್ವೀಕರಿಸುವುದಾಗಿ ಭಗವಂತ್ ಮಾನ್ ತಿಳಿಸಿದ್ದಾರೆ.
ಈ ನಡುವೆ ಪಂಜಾಬ್ ಸಿಎಂ ಕಚೇರಿಯಲ್ಲಿದ್ದ ಹಾಲಿ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಅವರ ಭಾವಚಿತ್ರಗಳನ್ನು ತೆಗೆಯಲು ಸೂಚಿಸಿರುವ ಆಮ್ ಆದ್ಮಿ ಪಕ್ಷ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಭಗತ್ ಸಿಂಗ್ ಫೋಟೋವನ್ನು ಹಾಕುವಂತೆ ತಿಳಿಸಿದೆ.